ನೀರಿಗಾಗಿ ಬಳ್ಳಾರಿಯ ಕಂಪ್ಲಿ ಬಂದ್ !

Kannada News

19-08-2017

ಬಳ್ಳಾರಿ: ಕೃಷಿ ಚಟುವಟಿಕೆಗಳಿಗೆ ತುಂಗಭದ್ರ ಜಲಾಶಯದಿಂದ ನೀರು ಬಿಡುವಂತೆ ಆಗ್ರಹಿಸಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಂಪ್ಲಿ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ವಿವಿಧ ಮಠಾಧೀಶರೊಂದಿಗೆ, ವಿವಿ ರೈತ ಸಂಘಟನೆ ಮತ್ತು ರಾಜಕೀಯ ಪಕ್ಷಗಳ ಮುಖಂಡರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ಈ ಮೊದಲು ಎರೆಡು ಬೆಳೆಯಲಾಗುತ್ತಿತ್ತು. ಮಳೆ ಕೊರತೆಯಿಂದ ಒಂದು ಬೆಳೆ ಬೆಳೆಯುವುದೂ ಕಷ್ಟವಾಗಿದೆ, ಕಾರಣ ಜಲಾಶಯಕ್ಕೆ ಬಂದ ನೀರನ್ನು ಕೈಗಾರಿಕೆಗಳಿಗೆ ನೀಡುತ್ತಿದೆ. ಅದು‌ ನಿಲ್ಲಬೇಕು ಕೂಡಲೆ ಕೃಷಿಗೆ ನೀರು ಹರಿಸಬೇಕೆಂದು ಸರಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದ ಬಂದ್ ಮಾಡಿದ್ದಲ್ಲದೆ. ಸಾರಿಗೆ  ಸಂಪರ್ಕ,ವ್ಯಾಪಾರ ವಹಿವಾಟು ಸಹ ಬಂದ್ ಆಗಿತ್ತು. ನೀರಿಗಾಗಿ ದಿನೇ ದಿನೇ ಜಿಲ್ಲೆಯಲ್ಲಿ ಪ್ರತಿಭಟನೆ ಹೆಚ್ಚುತ್ತಿದ್ದು ಬಿಗಿ ಪೊಲೀಸ್ ಬಂದೋಬಸ್ತು ಒದಗಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ