ಮರಳು ದಂಧೆ: ಪಿಎಸ್ಐ ಮೇಲೆ ಹಲ್ಲೆ !

Kannada News

19-08-2017

ಬಳ್ಳಾರಿ: ಅಕ್ರಮವಾಗಿ ಬೊಲೆರೊ ವಾಹನದಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದವನನ್ನು ಅಡ್ಡಗಟ್ಟಿ ತಪಾಸಣೆಗೆ ಮುಂದಾದ ಸಂದರ್ಭದಲ್ಲಿ, ವಾಹನ ಚಾಲಕ ಪೊಲೀಸರಿಗೆ ಅವಾಜ್ ಹಾಕಿ ಹಲ್ಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ತಾಲ್ಲೂಕಿನ ತಗ್ಗಿನ ಬೂದಿಹಾಳ್ ಗ್ರಾಮದ ಗಾದೆಪ್ಪ ಹಲ್ಲೆ ನಡೆಸಿದ ವ್ಯಕ್ತಿ. ಈತ  ಬೊಲೆರೊ ಪಿಕಪ್ ವಾಹನದಲ್ಲಿ ಹಗರಿ‌ನದಿಯಿಂದ, ಒಂದು ಟನ್ ಮರಳನ್ನು ಅಕ್ರಮವಾಗಿ ತೆಗೆದುಕೊಂಡು ನಗರಕ್ಕೆ ಬಂದಿದ್ದಾನೆ. ರಾತ್ರಿ ಗಸ್ತಿನಲ್ಲಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪಿಎಸ್ಐ  ಸರ್ದಾರ್ ಮತ್ತವರ ಸಿಬ್ಬಂದಿ ಸತ್ಯ ಸಾಯಿ‌ನಗರದ ದತ್ತಾತ್ರೇಯ ನಗರದ ಬಳಿ ತಡೆದು ವಿಚಾರಿಸಿದ್ದಾರೆ. ಈ ವೇಳೆ ನನ್ನ ಬಳಿ ಯಾವುದೇ ದಾಖಲೆ ಇಲ್ಲ. ಏನಾದರೂ ಮಾಡಿ ಎಂದು ಮುಂದೆ ಹೋಗಿದ್ದಾನೆ. ಅಡ್ಡಗಟ್ಟಿದ ಪಿಎಸ್ಐ ಮೇಲೆ ವಾಹನ ನುಗ್ಗಿಸಿದ್ದರಿಂದ ಆತ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ತಕ್ಷಣ ಎಲ್ಲಾ ಸಿಬ್ಬಂದಿ ಅಡ್ಡಗಟ್ಟಿದಾಗ ಆತ ವಾಹನ ಬಿಟ್ಟು ಹೋಡಿ ಹೋಗಿದ್ದ‌, ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ಗ್ರಾಮೀಣ ಪೊಲೀಸರು ಆರೋಪಿ ಗಾದೆಪ್ಪನನ್ನು ಬಂಧಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ