ಗೋಮಾಂಸ: ಅನುಮಾನದ ಮೇಲೆ ವ್ಯಕ್ತಿಗೆ ಹಲ್ಲೆ !

Kannada News

19-08-2017

ಪಾಟ್ನಾ: ದೇಶಾದ್ಯಂತ ಗೋಮಾಂಸ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆ ನಿಡಿರುವ ಬೆನ್ನಲ್ಲೇ, ಬಿಹಾರದಲ್ಲಿ ಗೋಮಾಂಸ ಮಾರಾಟಮಾಡುತ್ತಿದ್ದಾರೆಂಬ ಅನುಮಾನದ ಮೇಲೆ 6 ಜನರನ್ನು ಥಳಿಸಿರುವ ಘಟನೆ ವರದಿಯಾಗಿದೆ. ಬಿಹಾರದ ಚಂಪಾರಣ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಜಿಲ್ಲೆಯ ದುಮ್ರಾ ಎಂಬ ಹಳ್ಳಿಯ ಮನೆಯೊಂದರಲ್ಲಿ ಗೋಮಾಂಸ ಮಾರಾಟಮಾಡುತ್ತಿದ್ದಾರೆ ಎಂದು, ಮನೆಯಲ್ಲಿದ್ದ ಆರು ಜನರನ್ನು ಮನಬಂದಂತೆ ದುಷ್ಕರ್ಮಿಗಳು ಥಳಿಸಿದ್ದಾರೆಂದು, ಡಿ.ವೈ.ಎಸ್.ಪಿ ಸಂಜಯ್ ಕುಮಾರ್ ಝಾ ತಿಳಿಸಿದ್ದಾರೆ. ಕೆಲವು ದುಷ್ಕರ್ಮಿಗಳು ದುಮ್ರಾ ಹಳ್ಳಿಯ ಮನೆಯ ಸುತ್ತಲೂ, ಧಾವಿಸಿ ಮನೆಯಲ್ಲಿದ್ದವರನ್ನು ಎಳದಾಡಿ, ಮನಬಂದಂತೆ ಹೊಡೆದಿದ್ದಾರೆ. ಘಟನೆಯಲ್ಲಿ ಹೊಡೆದಾಟವನ್ನು ಬಿಡಿಸಲು ಬಂದಿದ್ದ, ಗ್ರಾಮದ ಹಿರಿಯ ಮತ್ತು ಪಂಚಾಯತಿಯ ಮುಖ್ಯಸ್ಥನನ್ನೂ, ಹೊಡೆದಿರುವುದಾಗಿ ತಿಳಿದು ಬಂದಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಸಂಜಯ್ ಝಾ ತಿಳಿಸಿದ್ದಾರೆ. ಘಟನೆಯ ನಂತರ ಪೊಲೀಸರು ಗ್ರಾಮಕ್ಕೆ ಆಗಮಿಸಿದ್ದೂ, ಆರೋಪಿಗಳನ್ನು ಬಂಧಿಸುವಂತೆ ಮತ್ತು ಗ್ರಾಮಸ್ಥರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಪೊಲೀಸರ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ