ರಾಜಬೀದಿಗಳಲ್ಲಿ ಗಜಪಡೆ ತಾಲೀಮು !

Kannada News

19-08-2017

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ-2017 ಮಹೋತ್ಸವಕ್ಕೆ ಭಾರೀ ಸಿದ್ದತೆ ನಡೆದಿದ್ದೂ, ನಿನ್ನೆಯಷ್ಟೇ ಗಜಪಡೆಯ ತಾಲೀಮು ಆರಂಭವಾಗಿತ್ತು. ಇನ್ನು ಇಂದೂ ಕೂಡ ಗಜಪಡೆಯ ತಾಲೀಮು ಮುಂದುವರೆದಿದೆ. ಮೈಸೂರಿನ ರಾಜಬೀದಿಗಳಲ್ಲಿ ಗಜಪಡೆಯ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಆನೆಗಳ ಗಾಂರ್ಭೀರ್ಯದ ನಡಿಗೆ ನಡೆಸುತ್ತಿದ್ದೂ, ಅರಮನೆಯಿಂದ 8 ಆನೆಗಳೂ ಭಾಗಿಯಾಗಿವೆ. ನಗರದ ಚಾಮರಾಜೇಂದ್ರ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಗಜಪಡೆ ಸಾಗಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಆನೆಗಳ ನಡಿಗೆ ಸಾಗಲಿದೆ. ದಸರಾ ಆನೆಗಳ ತಾಲೀಮು ಪ್ರಕ್ರಿಯೆಯು ಪ್ರಾಥಮಿಕ ಹಂತವಾಗಿದೆ. ನಗರದ ರಸ್ತೆಗಳು, ವಾಹನಗಳ ಶಬ್ದಕ್ಕೆ ಆನೆಗಳನ್ನು ಒಗ್ಗಿಸುವ ಸಲುವಾಗಿ ಪ್ರತಿನಿತ್ಯ ನಡೆಸುವ ನಡಿಗೆ ತಾಲೀಮು ಇದಾಗಿದೆ. ನಿನ್ನೆಯಷ್ಟೇ ಆನೆಗಳ ತೂಕ ಪರೀಕ್ಷೆ ಮಾಡಲಾಗಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ