ಜಪಾನ್ ಮಹಿಳೆಯೊಂದಿಗೆ ಜಗಳ: ನಾಲ್ವರ ಬಂಧನ !

Kannada News

18-08-2017

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯಲ್ಲಿ, ನಿನ್ನೆ ರಾತ್ರಿ ಕಾರಿನಲ್ಲಿ ಹೋಗುತ್ತಾ ಜಪಾನ್ ಮಹಿಳೆಯ ಕಾರಿಗೆ ಡಿಕ್ಕಿ ಹೊಡೆದು, ಜಗಳ ಮಾಡಿದ ನಾಲ್ವರ ಮೇಲೆ ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿ ಕಾರು ಚಲಾಯಿಸಿ ಎರಡು ಕಾರ್‍ ಗಳಿಗೆ ಡ್ಯಾಮೇಜ್ ಮಾಡಿದ್ದ ಆರೋಪಿಗಳು, ನೈಸ್ ಟೋಲ್ ಬಳಿ ನಿಲ್ಲಿಸಿದ್ದ ಜಪಾನ್ ಮಹಿಳೆಯ ಕಾರಿಗೂ ಡಿಕ್ಕಿ ಹೊಡೆದಿದ್ದಾರೆ. ಇದನ್ನ ಪ್ರಶ್ನಿಸಿದ್ದ ಜಪಾನ್ ಮಹಿಳೆ ಜೊತೆ ಜಗಳ ತೆಗೆದು ಅಲ್ಲಿಂದ ಪರಾರಿಯಾಗಿದ್ದರು. ಈ ದೃಶ್ಯ ಗಮನಿಸಿದ ವ್ಯಕ್ತಿಯೊಬ್ಬರು 'ನಮ್ಮ 100' ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಘಟನೆ ನಡೆದ ಅರ್ಧ ಗಂಟೆಯೊಳಗೆ ಆರೋಪಿಗಳನ್ನು ನಂದಿನಿ ಲೇಔಟ್ ಬಳಿ ಪತ್ತೆಹಚ್ಚಿದ ಪೀಣ್ಯ ಸಂಚಾರ ಪೊಲೀಸರು, ಅಪಘಾತವೆಸಗಿದ ಇನ್ನೋವಾ ಕಾರನ್ನು ವಶಕ್ಕೆ ಪಡೆದು ನಾಲ್ವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ