ಏನ್ಮಾಡಿದ್ರೂ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬರಲ್ಲ..?

Kannada News

18-08-2017

ಬಾಗಲಕೋಟೆ: ಯಡಿಯೂರಪ್ಪ ಮತ್ತು  ಕುಮಾರಸ್ವಾಮಿಗೆ ಭ್ರಮೆಯಲ್ಲಿದ್ದಾರೆ. ರಾಜ್ಯದ ಜನತೆ ನಮ್ಮನ್ನ ಒಪ್ಪಿದ್ದಾರೆ. ಏನೇ ತಿಪ್ಪರಲಾಗ ಹಾಕಿದ್ರು ಇವರು ಅಧಿಕಾರಕ್ಕೆ ಬರಲ್ಲ ಎಂದು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, 2018 ರ ಚುನಾವಣೆಯಲ್ಲಿ ಬಹುಮತದಿಂದ ಗೆಲುವು ಸಾಧಿಸುತ್ತೇವೆ ಎಂದರು. ಬಿ.ಎಸ್.ವೈ ಮೇಲೆ ಎಸಿಬಿ ಕೇಸ್ ವಿಚಾರವಾಗಿ ಮಾತನಾಡಿದ ಸಿಎಂ, ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಡಿ.ಕೆ.ಶಿವಕುಮಾರ್ ಮೇಲೆ ಅವರು ಮಾಡಿದ್ದೇನು. ಕಾನೂನಿನ ಮುಂದೆ ಎಲ್ಲರೂ ಒಂದೇ, ಕಾನೂನಿನಂತೆ ಯಡಿಯೂರಪ್ಪ ವಿರುದ್ದ ಕ್ರಮ ಕೈಗೊಂಡಿದ್ದಾರೆ, ಕಾನೂನು ಪಾಲನೆಯೇ ಬೇಡ ಅಂದ್ರೆ ಹೇಗೆ? ಎಂದರು. ಎಸಿಬಿಗೆ ಒಬ್ಬರು ದೂರು ನೀಡಿದ್ದರಿಂದ ಕೇಸ್ ದಾಖಲಾಗಿ, ಕ್ರಮಕೈಗೊಂಡಿದ್ದಾರೆ ಎಂದು ತಿಳಿಸಿದರು. ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ, ಹೈಕಮಾಂಡ್ ಜೊತೆ ಮಾತನಾಡಿದ್ದೇನೆ, ಈಗ ಪ್ರಸ್ತಾಪ ಬೇಡ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ