ಬಿಎಂಟಿಸಿ ಬಸ್ ಡಿಕ್ಕಿ: ಕೋಮಾ ಸ್ಥಿತಿಯಲ್ಲಿ ವ್ಯಕ್ತಿ

Kannada News

18-08-2017

ಬೆಂಗಳೂರು: ನೆಲಮಂಗಲದ ವೀವರ್ಸ್ ಕಾಲೋನಿಯ ಬಳಿ ಗುರುವಾರ ರಾತ್ರಿ ವೇಗವಾಗಿ ಬಂದ ಬಿಎಂಟಿಸಿ ಬಸ್, ರಸ್ತೆ ವಿಭಜಕ ದಾಟುತ್ತಿದ್ದ ಬೈಕ್‍ ಗೆ ಡಿಕ್ಕಿ ಹೊಡೆದು ಟೈಲರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಟೈಲರ್ ರಮೇಶ್(28) ಸ್ಥಳೀಯ ಆಸ್ಪತ್ರೆಗೆ ಪಡೆಯುತ್ತಿದ್ದು, ಕೋಮಾ ಸ್ಥಿತಿಯಲ್ಲಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ. ರಮೇಶ್ ಮನೆಯಿಂದ ಟೈಲರ್ ಅಂಗಡಿಗೆ ಬೈಕ್‍ ನಲ್ಲಿ ಹೋಗುತ್ತಾ ವೀವರ್ಸ್ ಕಾಲೋನಿಯ ಬಳಿ ರಸ್ತೆ ವಿಭಜಕ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಬಸ್ ಕೆಳಗೆ ಸಿಲುಕಿ ರಮೇಶ್ ಬರೋಬ್ಬರಿ 15 ಅಡಿ ದೂರಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪಘಾತದ ಬಳಿಕ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾಗಿದ್ದು  ಸ್ಥಳೀಯರು ಗಾಯಾಳು ರಮೇಶ್‍ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.  ನೆಲಮಂಗಲ ಸಂಚಾರ ಪೊಲೀಸರು ಬಸ್ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ