ನಡುರಸ್ತೆಯಲ್ಲಿ ಯುವತಿಗೆ ಇರಿದವನ ಬಂಧನ !

Kannada News

18-08-2017

ಚೆನ್ನೈ: ಚೆನ್ನೈನ ಟಿ.ನಗರ್ ನಲ್ಲಿ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆ ನಡೆದು ಎರಡು ಗಂಟೆಗಳೊಳಗೆ ಆರೋಪಿ ಆರ್.ಸತ್ಯನಾರಾಯಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಗೆ ತುತ್ತಾಗಿದ್ದ ಯುವತಿ ಡಿಪ್ಲೊಮಾ ವಿದ್ಯಾರ್ಥಿನಿ. ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಆಟಿಕೆ ವ್ಯಾಪಾರಿಯಾಗಿರೋ ಸತ್ಯನಾರಾಯಣ ಯುವತಿಯ ಪಕ್ಕದ ಮನೆಯಲ್ಲೇ ವಾಸವಾಗಿದ್ದ. ತನ್ನನ್ನು ಮದುವೆಯಾಗು ಅಂತಾ ವಿದ್ಯಾರ್ಥಿನಿಗೆ ಕಾಟ ಕೊಡುತ್ತಿದ್ದ. ಮಗಳನ್ನು ಮದುವೆಗೆ ಒಪ್ಪಿಸುವಂತೆ ಯುವತಿಯ ತಾಯಿಯನ್ನೂ ಪೀಡಿಸುತ್ತಿದ್ದ. ಆದರೆ ಯುವತಿ ನಿರಾಕರಿಸಿದ್ದಳು.

ಸ್ಟಡಿ ಸೆಂಟರ್ ಗೆ ಹೊರಟಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಬಂದಿದ್ದ ಸತ್ಯನಾರಾಯಣ, ಅವಳನ್ನು ತಡೆದು ತನ್ನನ್ನು ಮದುವೆಯಾಗುವಂತೆ ಕೇಳಿದ್ದ. ಆಕೆ ಒಪ್ಪದೇ ಇದ್ದಾಗ ಕತ್ತು ಮತ್ತು ಮುಖಕ್ಕೆ ಚಾಕುವಿನಿಂದ ತಿವಿದಿದ್ದಾನೆ. ಸಾರ್ವಜನಿಕರ ಎದುರೇ ಈ ಕೃತ್ಯ ನಡೆದಿದೆ. ಸುಮಾರು ಒಂದೂವರೆ ತಿಂಗಳಿನಿಂದ ಸತ್ಯನಾರಾಯಣ ಯುವತಿಯನ್ನು ಹಿಂಬಾಲಿಸಿಕೊಂಡು ಬರುತ್ತಲೇ ಇದ್ದ. ಪೊಲೀಸರಿಗೆ ದೂರು ನೀಡುವುದಾಗಿಯೂ ಯುವತಿ ಆತನಿಗೆ ಎಚ್ಚರಿಕೆ ನೀಡಿದ್ದಳು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ