ಗುಟ್ಟಾಗಿ ನಡಿತಾ ನಟಿ ರಿಯಾ ಸೇನ್ ಮದುವೆ..?

Kannada News

18-08-2017

ಮುಂಬೈ: ಬಾಲಿವುಡ್ ನಟಿ ರಿಯಾ ಸೇನ್ ರಹಸ್ಯವಾಗಿ ತಮ್ಮ ಬಾಯ್ ಫ್ರೆಂಡ್ ಶಿವಂ ತಿವಾರಿ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಬುಧವಾರ ಪುಣೆಯಲ್ಲಿ ಇವರ ಮದುವೆ ಗುಟ್ಟಾಗಿ ನೆರವೇರಿದೆ ಎನ್ನಲಾಗುತ್ತಿದೆ. ಕುಟುಂಬದವರು ಹಾಗೂ ತೀರಾ ಹತ್ತಿರದ ಸ್ನೇಹಿತರು ಮಾತ್ರ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ ಅಂತಾ ಹೇಳಲಾಗ್ತಿದೆ. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ರಿಯಾ ಅಥವಾ ಶಿವಂ ತಿವಾರಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಹೋದರಿ ರೀಮಾ ಅಕೌಂಟ್ ನಲ್ಲೂ ಯಾವುದೇ ಮಾಹಿತಿ ಇಲ್ಲ. ತಮ್ಮ ಇಬ್ಬರು ಹೆಣ್ಣುಮಕ್ಕಳು ಶ್ರೀಮಂತರನ್ನೇ ಆರಿಸಿಕೊಳ್ಳಬೇಕು, ಯಾಕಂದ್ರೆ ಅವರಿಗೆ ದುಡ್ಡಿನ ಬೆಲೆಯೇ ಗೊತ್ತಿಲ್ಲ ಅಂತಾ ತಾಯಿ ಮೂನ್ ಮೂನ್ ಸೇನ್ ಹೇಳಿದ್ದರು. ಜಾನ್ ಅಬ್ರಾಹಂ ಜೊತೆಗೂ ರಿಯಾ ಸೇನ್ ಹೆಸರು ಕೇಳಿಬಂದಿತ್ತು. ಬಾಲನಟಿಯಾಗಿ ರಿಯಾ ಚಿತ್ರರಂಗ ಪ್ರವೇಶಿಸಿದ್ದಳು. ಹಲವು ಬಾಲಿವುಡ್ ಚಿತ್ರಗಳಲ್ಲೂ ನಟಿಸಿದ್ದಾಳೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ