ಮಗನನ್ನೇ ಕೊಂದ ತಾಯಿ !

Kannada News

18-08-2017

ಮುಂಬೈ: ಮಾದಕ ದ್ರವ್ಯ ಸೇವನೆಯಿಂದ ಪತ್ನಿಯನ್ನು ಹಿಂಸಿಸುತ್ತಿದ್ದ ಮಗನಿಂದ ರೋಸಿಹೋಗಿದ್ದ ತಾಯಿಯೊಬ್ಬರು, ಸೊಸೆಯನ್ನು ರಕ್ಷಿಸುವುದಕ್ಕೋಸ್ಕರ ತಮ್ಮ ಸ್ವಂತ ಮಗನನ್ನೇ ಕೊಂದ ದಾರುಣ ಘಟನೆ ಮುಂಬೈಯಲ್ಲಿ ನಡೆದಿದೆ. ಮಗನ ಶವ ಕೊಳೆತ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಘಟನೆ ಆಗಸ್ಟ್ 15 ರಂದು ನಡೆದಿದ್ದೂ, ತಡವಾಗಿ ಬೆಳಕಿಗೆ ಬಂದಿದೆ.

ಅನ್ವಾರಿ ಇದ್ರಿಸಿ ಎಂಬ ಮಹಿಳೆಯ ಮಗ ‘ನದೀಮ್’ ಮಾದಕ ದ್ರವ್ಯಕ್ಕೆ  ದಾಸನಾಗಿದ್ದ. ಇದೇ ಕಾರಣಕ್ಕಾಗಿಯೇ ಆತನ ಪತ್ನಿ ಮನೆಬಿಟ್ಟು ಹೋಗಿದ್ದಳು. ಪತ್ನಿ ಮನೆಬಿಟ್ಟು ಹೋದ ಎರಡು ವರ್ಷದ ನಂತರ ಮತ್ತೊಬ್ಬ ಮಹಿಳೆಯೊಡನೆ ಮದುವೆಯಾದ ನದೀಮ್, ಕೆಲ ದಿನ ಆಕೆಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ಮಗನ ವರ್ತನೆ ಮಿತಿ ಮೀರಿದಾಗ ಸೊಸೆಯನ್ನು ಗೆಳತಿಯ ಮನೆಗೆ ಕಳುಹಿಸಿ,  ತನ್ನ ದುಪ್ಪಟ್ಟಾವನ್ನು ಮಗನ ಕತ್ತಿಗೆ ಸುತ್ತಿ ಆತನನ್ನು ಕೊಲೆ ಮಾಡಿದ್ದಾರೆ. ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ