ಬಾರ್ಸಿಲೋನಾ ದಾಳಿ: ಭಾರತೀಯರು ಸುರಕ್ಷಿತ !

Kannada News

18-08-2017

ಸ್ಪೇನ್: ಸ್ಪೇನ್ ನ ಬಾರ್ಸಿಲೋನಾ ಹಾಗೂ ಕ್ಯಾಂಬ್ರಿಲ್ಸ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಯಾವುದೇ ಭಾರತೀಯರು ಮೃತಪಟ್ಟಿಲ್ಲ. ಯಾವ ಭಾರತೀಯರಿಗೂ ಗಾಯಗಳಾಗಿಲ್ಲ ಎಂದು, ಘಟನೆ ನಂತರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆ ಖಂಡಿಸಿರುವ ಸುಷ್ಮಾ ಸ್ವರಾಜ್, ಉಗ್ರರ ದಾಳಿಯಲ್ಲಿ ಭಾರತೀಯರು ಗಾಯಗೊಂಡಿರುವ ಬಗ್ಗೆ ಮಾಹಿತಿಯಿಲ್ಲ ಎಂದು ಟ್ವಿಟ್ ಮಾಡಿದ್ದಾರೆ. ಸ್ಪೇನ್ ನಲ್ಲಿರುವ ಭಾರತೀಯ ದೂತವಾಸಿಗಳೊಂದಿಗೆ ಸಂಪರ್ಕದಲ್ಲಿದ್ದು, ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆಂದು ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಸ್ಪೇನ್ ಭಾರತೀಯ ರಾಯಭಾರಿ ಕಚೇರಿ ಸಹಾಯವಾಣಿ ನಂಬರ್ ನೀಡಿದೆ.  ಸ್ಪೇನ್ ಬಾರ್ಸಿಲೋನಾದಲ್ಲಿ ಉಗ್ರನೊಬ್ಬ ಪಾದಾಚಾರಿಗಳ ಮೇಲೆ ವ್ಯಾನ್ ಹರಿಸಿದ್ದ. ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಭೀಕರ ಉಗ್ರ ದಾಳಿಯನ್ನು ವಿಶ್ವನಾಯಕರು ಒಕ್ಕೋರಲಿನಿಂದ ಖಂಡಿಸಿದ್ದು, ಇದೊಂದು ಕಪ್ಪುದಿನ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ