ಇನ್ಫೋಸಿಸ್ ಸಿಇಒ: ವಿಶಾಲ್ ಸಿಕ್ಕಾ ರಾಜೀನಾಮೆ

Kannada News

18-08-2017

ಮಹತ್ವದ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ಸಿಇಒ, ಎಂಡಿ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದಾರೆ.  ಸಂಸ್ಥೆಯನ್ನು ಬಿಟ್ಟು ಹೋಗುವ ಉದ್ಯೋಗಿಗಳಿಗೆ ಕೊನೆಯಲ್ಲಿ ಹೆಚ್ಚಿನ ವೇತನ ನೀಡಲಾಗುತ್ತಿದ್ದ ಬಗ್ಗೆ ಇನ್ಫೋಸಿಸ್ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು, ಈ ನಡುವೆಯೇ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿರುವುದು ಮಹತ್ವಪಡೆದುಕೊಂಡಿದೆ.

ವಿಶಾಲ್ ಸಿಕ್ಕಾ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಯುಬಿ ಪ್ರವೀಣ್ ರಾವ್ ಅವರನ್ನು ಹಂಗಾಮಿ ಸಿಇಒ, ಎಂಡಿ ಆಗಿ ನೇಮಕ ಮಾಡಲಾಗಿದೆ. ಇಂದು ನಡೆದ ಬೋರ್ಡ್ ಸಭೆಯಲ್ಲಿ ವಿಶಾಲ್ ಸಿಕ್ಕಾ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು,  ರಿತಿಕಾ ಸೂರಿ ರಾಜೀನಾಮೆಯಿಂದ ತೆರವಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹುದ್ದೆಯನ್ನು ಸಿಕ್ಕಾ ಅವರು ನಿಭಾಯಿಸಲಿದ್ದಾರೆ. ಕಳೆದ ವರ್ಷ  ಆಗಸ್ಟ್ 1 ರಂದು ಇನ್ಫೋಸಿಸ್ ನ ಸಿಇಒ ಮತ್ತು ಎಂಡಿಯಾಗಿ ಅಂದಿನ ಸಿಇಒ ಆಗಿದ್ದ, ಎಸ್.ಡಿ.ಶಿಬುಲಾಲ್ ಅವರಿಂದ ವಿಶಾಲ್ ಸಿಕ್ಕಾ ಅವರು ಅಧಿಕಾರ ಸ್ವೀಕರಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ