ಭಾರತಕ್ಕೆ ಜಪಾನ್ ಪ್ರಧಾನಿ: ಚೀನಾಗೆ ಸಂಕಟ18-08-2017 806 1

ನವದೆಹಲಿ: ದಿಢೀರನೇ ಜಪಾನ್ ನ ಪ್ರಧಾನಿ ಮುಂದಿನ ತಿಂಗಳು ಭಾರತಕ್ಕೆ ಬೇಟಿ ನೀಡುತ್ತಿದ್ದಾರೆ. ಈ ನಡುವೆ, ಡೋಕ್ಲಾಮ್ ವಿವಾದಿತ ಪ್ರದೇಶದಲ್ಲಿ ದುರ್ವರ್ತನೆ ತೋರುತ್ತಿರುವ ಚೀನಾ ವಿರುದ್ಧ ಜಪಾನ್ ಕಿಡಿಕಾರಿದ್ದು, ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇನ್ನು, ಜಪಾನ್ ಶಿಂಜೋ ಅಬೆ  ಅವರು ಭಾರತದ ಪ್ರವಾಸ ಕೈಗೊಳ್ಳುತ್ತಿರುವುದು ಚೀನಾಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಇನ್ನು ಇತ್ತೀಚೆಗೆ, ಡೋಕ್ಲಾಮ್ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿದ್ದ, ಜಪಾನ್ ರಾಷ್ಟ್ರದ ರಾಯಭಾರಿ ಕೆಂಜಿ ಹಿರಮಟ್ಸು ಅವರು, ಡೋಕ್ಲಾಮ್ ಗಡಿ ವಿವಾದ ಸಂಬಂಧ ಭಾರತ ಹಾಗೂ ಚೀನಾ ಗಡಿಯಲ್ಲಿ ಕಳೆದೆರಡು ತಿಂಗಳುಗಳಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಡೋಕ್ಲಾಮ್ ಗಡಿಯಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತ ಗಡಿಯಲ್ಲಿ ತನ್ನ ಸೇನೆಯನ್ನು ನಿಯೋಜನೆಗೊಳಿಸಿದೆ. ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಸೇನೆ ನಿಯೋಜನೆ ಮುಖ್ಯವಾಗಿದೆ. ಡೋಕ್ಲಾಮ್ ಗಡಿಯಲ್ಲಿ ಭಾರತೀಯ ಸೇನೆ ಯಥಾಸ್ಥಿತಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದರು.

ಡೋಕ್ಲಾಮ್ ವಲಯ ಹಾಗೂ ಲಡಾಖ್ ಪ್ರದೇಶದಲ್ಲಿ ಕ್ಯಾತೆ ತೆಗೆದು ಈಗಾಗಲೇ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಚೀನಾ, ಇದೀಗ ಮತ್ತೊಮ್ಮೆ ಇವರ ಭೇಟಿಯನ್ನು ವಿರೋಧಿಸಿದರೆ ಮತ್ತಷ್ಟು ಮುಜುಗರಕ್ಕೀಡಾಗುವ ಸಂಭವವಿದೆ.

Links :

ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Good news
  • Udaya
  • Painter