ಭೀಕರ ರಸ್ತೆ ಅಪಘಾತ ಮೂವರ ಸಾವು !

Kannada News

18-08-2017

ಬೀದರ್: ಖಾಸಗಿ ಬಸ್ ಮತ್ತು ಟಂಟಂ ವಾಹನ ನಡುವೆ ಅಪಘಾತ ಸಂಭವಿಸಿದ್ದೂ, ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲೇ, ಸಾವನ್ನಪ್ಪಿದ್ದಾರೆ. ಅಲ್ಲದೇ ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಘಟನೆಯು ಬೀದರ್ ಜಿಲ್ಲೆಯಲ್ಲಿ ಸಂಭವಿಸಿದೆ. ಭಾಲ್ಕಿ- ಬೀದರ್ ಮುಖ್ಯ ರಸ್ತೆಯ ಧಾರಜವಾಡಿ ಗ್ರಾಮದ ಬಳಿ, ಖಾಸಗಿ ಸ್ಕೂಲ್ ಬಸ್ ಮತ್ತು ಟಂಟಂ ವಾಹನ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಲ್ಲಿ ಕರಡ್ಯಾಳ ಗ್ರಾಮದ ಹನುಮಂತ ಹಡಪದ(22), ತಳವಾಡ ಗ್ರಾಮದ ಧೋಂಡಿಬಾ ವೈಜೀನಾಥ(20), ಸೇರಿದಂದೆ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಗಂಭೀರ ಗಾಯ ಗಾಯಗೊಂಡವನ್ನು ಬೀದರ್ ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ