ಅಂಚೆ ನೌಕರರ ಅನಿರ್ದಿಷ್ಟಾವಧಿ ಧರಣಿ !

18-08-2017
ಶಿರಸಿ: ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಕರೆ ನೀಡಿರುವ, ಅನಿರ್ದಿಷ್ಟಾವಧಿ ಧರಣಿಗೆ ಶಿರಸಿ ಡಿವಿಜನ್ ನೌಕರರ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದರಂತೆಯೇ ಅಂಚೆ ಕಚೇರಿ ಎದುರು, ಅಂಚೆ ನೌಕರರು, ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಜಿಡಿಎಸ್ ಕಮಿಟಿ ವರದಿಯನ್ನು ಸಂಘವು ಕೊಟ್ಟಿರುವ ಬದಲಾವಣೆಯೊಂದಿಗೆ ಜಾರಿ ಮಾಡಬೇಕು. 8 ಗಂಟೆ ಕೆಲಸ ಖಾಯಂ ಮಾಡಬೇಕು. ದೆಹಲಿ ಮತ್ತು ಮದ್ರಾಸ್ ನ್ಯಾಯಾಲಯದ ತಿರ್ಮಾನದಂತೆ ಜಿಡಿಎಸ್ ನೌಕರರಿಗೆ ಪಿಂಚಣಿ ನೀಡಬೇಕು ಆಗ್ರಹಿಸಿದ್ದಾರೆ. ಅಲ್ಲದೇ ಟಾರ್ಗೆಟ್ ಹೆಸರಿನಲ್ಲಿ ನೌಕರರ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ