ಮನೆ ಸೆಕ್ಯೂರಿಟಿ ಗಾರ್ಡ್ ನಿಂದಲೇ ಕಳ್ಳತನ !

Kannada News

18-08-2017

ಬೆಂಗಳೂರು: ಬೆಂಗಳೂರಿನ ಹೆಚ್‌.ಬಿ.ಆರ್. ಲೇಔಟ್ ನ ಕಾರ್ಪೋರೇಟರ್ ಆನಂದ್ ಅವರಿಗೆ ಸೇರದ ಒಡವೆಗಳು ಕಳ್ಳತನಾವಾಗಿದ್ದೂ, ಕಳ್ಳತನವಾದ 5 ದಿನಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಪೋರೇಟರ್ ಆನಂದ್ ಅವರಿಗೆ ಸೇರಿದ ಚಿನ್ನಾಭರಣಗಳನ್ನು ತನ್ನ ಸಂಬಂಧಿಕರಾದ, ರಘುರಾಜ್ ಮನೆಯ ಲಾಕರ್‌ ನಲ್ಲಿ ಇಡಲಾಗಿತ್ತು. ಆಗಸ್ಟ್ 13 ರಂದು, ರಘುರಾಜ್ ಮತ್ತು ಮನೆಯವರು ಶಿರಡಿ ದೇವಸ್ಥಾನಕ್ಕೆ ಹೋಗಿದ್ದರು, ಇದನ್ನೇ ಕಾದುಕುಳಿತಿದ್ದ ಕಳ್ಳರು, ಅಂದು ತಡರಾತ್ರಿ, ಮನೆಯೊಳಗೆ ಪ್ರವೇಶಿಸಿ, ಗ್ಯಾಸ್ ಕಟರ್‌ನಿಂದ ಲಾಕರ್ ಮುರಿದು ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು, ಪ್ರಕರಣ ಬೆನ್ನತ್ತಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಚಿನ್ನಾಭರಣಗಳನ್ನು ಜಪ್ತಿಮಾಡಿದ್ದಾರೆ. ನಾಲ್ಕೂವರೆ ಕೆ.ಜಿ ಚಿನ್ನ, ಎರಡು ಕೆ.ಜಿ ಬೆಳ್ಳಿ, ವಶಕ್ಕೆ ಪಡೆದಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ, ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ಅಕ್ಷರ್, ರಘುರಾಜ್ ಮನೆ ನೋಡಿಕೊಳ್ಳುತ್ತಿದ್ದು, ಆಗಸ್ಟ್ 13ರಂದು ಅಕ್ಷರ್ ಮತ್ತು ಸಹಚರರೇ ಮನೆಗೆ ನುಗ್ಗಿ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಕದ್ದ ಚಿನ್ನಾಭರಣಗಳೊಂದಿಗೆ ಪೂನಾದತ್ತ ಹೋಗುತ್ತಿದ್ದೂ, ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಬಾಣಸವಾಡಿ ಪೊಲೀಸರು, ತಕ್ಷಣವೇ ಬೆಳಗಾವಿ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಬೆಳಗಾವಿ ಸಮೀಪದ ಬಾಗೇವಾಡಿ ಟೋಲ್ ಬಳಿ ಆರೋಪಿಗಳ ಪತ್ತೆಯಾಗಿದ್ದೂ, ಪೂನಾಗೆ ತೆರಳಿ ಅಲ್ಲಿಂದ ಗೋರಖ್‌ಪುರ ತೆರಳಲು ಪ್ಲಾನ್ ಮಾಡಿದ್ದರು, ಆದರೆ ಸಿಕ್ಕಿಬಿದ್ದಿರುವ ಆರೋಪಿಗಳನ್ನು ಬೆಳಗಾವಿಯಿಂದ, ಬೆಂಗಳೂರಿಗೆ ಕರೆತಂದಿದ್ದಾರೆ. ಇದಲ್ಲದೇ ಐಟಿ ದಾಳಿಗೆ ಹೆದರಿ ಸ್ನೇಹಿತನ ಮನೆಯಲ್ಲಿ ಆಭರಣಗಳನ್ನು ಇಡಲಾಗಿತ್ತು, ಆಗಸ್ಟ್ 2ರಿಂದ ಡಿಕೆ ಶಿವಕುಮಾರ್‌ಗೆ ಸೇರಿದ ಮನೆ ಮತ್ತಿತರ ಕಡೆ ದಾಳಿಯಾಗಿತ್ತು, ಈ ಹಿನ್ನೆಲೆಯಲ್ಲಿ ತನ್ನ ಮೇಲೂ ದಾಳಿ ನಡೆಯಬಹುದು ಅನ್ನೋ ಭಯದಿಂದ ಕಾರ್ಪೋರೇಟರ್ ಆನಂದ್, ಸಂಬಂಧಿಕ ರಘುರಾಜ್ ಮನೆಯ ಲಾಕರ್‌ನಲ್ಲಿ ಇಡಲಾಗಿತ್ತು ಎಂದು ಹೇಳಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ