ಇಂದಿನಿಂದ ಗಜಪಡೆಗೆ ತಾಲೀಮು !

Kannada News

18-08-2017 500

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ-2017 ಮಹೋತ್ಸವದ ಹಿನ್ನೆಲೆ, ಇಂದಿನಿಂದ ಅರ್ಜುನ ನೇತೃತ್ವದ ದಸರಾ ಗಜಪಡೆಗೆ ನಿತ್ಯ ತಾಲೀಮು ಆರಂಭವಾಗಿದೆ. ತಾಲೀಮಿನ ಮೊದಲ ದಿನ ಆನೆಗಳ ತೂಕ ಪರಿಶೀಲನೆ  ಮಾಡಲಾಗಿದೆ. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿ ರಾಮ್ ಅಂಡ್ ಕೊ ಎಲೆಕ್ಟ್ರಾನಿಕ್, ತೂಕ ಮಾಡುವ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಪರಿಶೀಲನೆ ನಡೆಸಲಾಯಿತು. ಗಜಪಡೆಯ ಕ್ಯಾಪ್ಟನ್ ಅರ್ಜುನನ ತೂಕ 5250 ಕೆ.ಜಿ, ವಿಜಯ ಆನೆಯ ತೂಕ 2770 ಕೆ.ಜಿ, ಅಭಿಮನ್ಯುವಿನ ತೂಕ 4870 ಕೆ.ಜಿ, ವರಲಕ್ಷ್ಮಿಯ ತೂಕ 4970 ಕೆ.ಜಿ, ಬಲರಾಮನ ತೂಕ 4990 ಕೆ.ಜಿ, ಭೀಮನ ತೂಕ 3410 ಕೆ.ಜಿ, ಕಾವೇರಿಯ ತೂಕ 2820 ಕೆ.ಜಿ, ಗಜೇಂದ್ರ ಆನೆಯ ತೂಕ 4600 ಕೆ.ಜಿ. ಗಜಪಡೆಗಳಿಗೆ ತೂಕ ಪ್ರಕ್ರಿಯೆ, ಕಾಡಿ‌ನಲ್ಲಿ ತೂಕ ಇಳಿಸಿಕೊಂಡಿರುವ ದಸರಾ ಆನೆಗಳು, ಕಳೆದ ಬಾರಿ ದಸರಾ ಮುಗಿಸಿ ಕಾಡಿಗೆ ಹೋಗುವಾಗ ಇದ್ದ ತೂಕಗಳಿಗೂ, ಇವತ್ತಿನ ತೂಕದಲ್ಲೂ ದೊಡ್ಡ ವ್ಯತ್ಯಾಸ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಎಲ್ಲಾ ಆನೆಗಳ ತೂಕದಲ್ಲಿ ಗಮನಾರ್ಹ ಇಳಿಕೆಯಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ