ರಾಜ್ಯದಲ್ಲಿ ಏಕ ರೂಪ ಶಿಕ್ಷಣ ಜಾರಿಯಾಗಬೇಕು..?

Kannada News

17-08-2017

ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕ ರೂಪ ಶಿಕ್ಷಣ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿಗಳ ಪೋಷಕರ ಜಾಗೃತಿ ವೇದಿಕೆ ಹಾಗೂ ರಿಪಬ್ಲಿಕ್ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಸ್ವಾತಂತ್ರ ಉದ್ಯಾನದಲ್ಲಿ, ಪ್ರತಿಭಟನೆ ನಡೆಸಿದ ವೇದಿಕೆ ಹಾಗೂ ರಿಪಬ್ಲಿಕ್ ಸೇನೆ ಕಾರ್ಯಕರ್ತರು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕ ರೂಪದ ಶಿಕ್ಷಣ ಜಾರಿಗೊಳಿಸುವ ಜೊತೆಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಶಾಲೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ರವಿ, ವಿದ್ಯಾರ್ಥಿಗಳ ಹಾಗೂ ಪೋಷಕರ ಹಿತಕಾಪಾಡಬೇಕಾದ ಶಾಲಾ ಆಡಳಿತ ಮಂಡಳಿಗಳು, ಬಡಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ. ಅಲ್ಲದೆ, 2015ನೆ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದಂತೆ ಎಲ್ಲಾ ಶಾಲೆಗಳ ಪ್ರವೇಶದ ಮುಂಭಾಗದಲ್ಲಿ ಶುಲ್ಕದ ವಿವರಗಳನ್ನು ಪ್ರಕಟಿಸಬೇಕೆಂದು ಸೂಚಿಸಿದೆ. ಆದರೆ, ಯಾವುದೇ ಶಾಲೆಯಲ್ಲಿಇದು ಜಾರಿಯಾಗಿಲ್ಲ ಎಂದು ಆರೋಪಿಸಿದರು.

ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೂ ಇಲಾಖೆ ಅನುಮತಿ ನೀಡಿದ ಪಠ್ಯಕ್ರಮದಂತೆ ಮಾತ್ರ ಪಠ್ಯ-ಪುಸ್ತಕಗಳನ್ನು ಸರ್ಕಾರವೇ ನೇರವಾಗಿ ಏಕ ಗವಾಕ್ಷಿ ಮೂಲಕ ಪೋಷಕರಿಗೆ ಸ್ಥಳೀಯವಾಗಿ ವಿತರಸಬೇಕು. ಅದೇ ರೀತಿ, ಸಮವಸ್ತ್ರಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಶಾಲೆ ಪ್ರಾರಂಭಕ್ಕೆ ಮೊದಲೆ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರಿಪಬ್ಲಿಕ್ ಸೇನೆ ಅಧ್ಯಕ್ಷ ಜಿಗಣಿ ಶಂಕರ್, ವೇದಿಕೆ ಉಪಾಧ್ಯಕ್ಷ ಅಣ್ಣೇಗೌಡ, ಮುಖಂಡರಾದ ಸರಸ್ಪತಿ, ಸುಮಿತ್ರಾ, ನಂಜಪ್ಪ ಸೇರಿ ಪ್ರಮುಖರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ