ವೇಶ್ಯಾವಾಟಿಕೆ: 6 ಮಂದಿ ಬಂಧನ !

Kannada News

17-08-2017

ಮೈಸೂರು: ಮೈಸೂರು ಜಿಲ್ಲೆ, ಪಿರಿಯಾಪಟ್ಟಣದ ವಸತಿ ಗೃಹವೊಂದರಲ್ಲಿ  ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 6 ಜನರನ್ನು ಪೊಲೀಸರು ಬಂಧಿಸಿ 4 ಮಹಿಳೆಯರನ್ನು ರಕ್ಷಿಸಿದ್ದಾರೆ.

ಪಟ್ಟಣದ ಹೈಟೆಕ್ ಲಾಡ್ಜ್ ಹೆಸರಿನ ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿರಿಯಾಪಟ್ಟಣ ಠಾಣೆ ಪೊಲೀಸರು, ಲಾಡ್ಜ್ ನ ವ್ಯವಸ್ಥಾಪಕ ರಂಜನ್, ಗುತ್ತಿಗೆದಾರ ಸುರೇಶ್, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅರಕಲಗೂಡಿನ ಹರೀಶ್, ಪಿರಿಯಾಪಟ್ಟಣದ ಮಹೇಶ್, ವೀರಾಜಪೇಟೆಯ ಜುಬೇರ್, ಗೋಣಿಕೊಪ್ಪದ ರವಿ ಎಂಬುವವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದ 4 ಜನ ಮಹಿಳೆಯರನ್ನು ಮೈಸೂರಿನಲ್ಲಿರುವ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಪಿಐ ಎಚ್.ಎನ್. ಸಿದ್ದಯ್ಯ, ಪಿಎಸ್ಐ ರವಿಕಿರಣ್, ಸಿಬ್ಬಂದಿಗಳಾದ ಹಬೀಬುಲ್ಲಾ, ಮಂಜುನಾಥ್ ಭಾಗವಹಿಸಿದ್ದರು.


ಸಂಬಂಧಿತ ಟ್ಯಾಗ್ಗಳು

ಮೈಸೂರು ವೇಶ್ಯಾವಾಟಿಕೆ 6 ಮಂದಿ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ