ಬಸ್ ಡಿಕ್ಕಿ: ವ್ಯಾಪಾರಿ ಸಾವು

Kannada News

17-08-2017

ಬೆಂಗಳೂರು: ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು, ರಸ್ತೆ ದಾಟುತ್ತಿದ್ದ  ಜೋಳದ ವ್ಯಾಪಾರಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಕೆ.ಆರ್.ಪುರಂ ನ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ, ಸಂಭವಿಸಿದೆ. ಮೇಡಳ್ಳಿಯ ಸೈಯದ್ ಜಾನ್‍ಪಾಷ(55) ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಬೇಯಿಸಿದ ಜೋಳದ ವ್ಯಾಪಾರ ಮಾಡುತ್ತಿದ್ದ ಪಾಷ ಅವರು, ಸಿಟಿ ಮಾರುಕಟ್ಟೆಗೆ ಹೋಗಿ ಜೋಳ ಖರೀದಿಸಿ ಮೂಟೆಯಲ್ಲಿ ತೆಗೆದುಕೊಂಡು, ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಮುಂಜಾನೆ 6 ವೇಳೆ ಜೋಳದ ಮೂಟೆ ಹೊತ್ತುಕೊಂಡು, ರಸ್ತೆ ದಾಟುತ್ತಿದ್ದರು. ಈ ವೇಳೆ ಕೆ.ಆರ್.ಪುರಂ ನಿಂದ ಹೊಸಕೋಟೆ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡ ಪಾಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಪುರಂ ಸಂಚಾರ ಪೊಲೀಸರು ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ