ಅಪರೇಷನ್ ಡಾಗ್ !

Kannada News

17-08-2017

ಬೆಂಗಳೂರು: ನಗರದ ಮತ್ತಿಕೆರೆಯ ಎಂ.ಎಸ್.ಆರ್ ನಗರದಲ್ಲಿ ಮಹಿಳೆಯೊಬ್ಬರ ಮೇಲೆ ಬೀದಿನಾಯಿ ದಾಳಿ ನಡೆಸಿದ ಸುದ್ದಿ ತಿಳಿದ ತಕ್ಷಣವೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ಗುರುವಾರ ಬೆಳಿಗ್ಗೆಯಿಂದಲೇ ಅಪರೇಷನ್ ಡಾಗ್ ಕಾರ್ಯಾಚರಣೆ ನಡೆಸಿ ಬೀದಿ ನಾಯಿಗಳನ್ನು ಹಿಡಿಯುತ್ತಿದ್ದಾರೆ.

ಎಂ.ಎಸ್.ಆರ್ ನಗರದಲ್ಲಿ ನಿನ್ನೆ ಬೀದಿನಾಯಿಗಳು ಗೃಹಿಣಿಯೊರ್ವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದವು. ನಾಯಿಗಳ ದಾಳಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಬೆಳಗ್ಗೆಯಿಂದಲೇ, ಎಂ.ಎಸ್.ಆರ್ ನಗರದ ವೆಲ್ತ್ ಫೇರ್ ಅಸೋಸಿಯೇಷನ್ ಮತ್ತು ಕಾರ್ಪೋರೇಟರ್ ಸುಮಂಗಲ ನೇತೃತ್ವದಲ್ಲಿ ನಾಯಿ ಹಿಡಿಯುವ ಕಾರ್ಯಾಚರಣೆ ನಡೆದಿದೆ.  ಬಲೆಗಳನ್ನು ಬಳಸಿ ನಾಯಿಗಳನ್ನು ಹಿಡಿಯಲಾಗಿದ್ದು, ಬಳಿಕ ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ನಗರದ ಹೊರವಲಯಗಳಲ್ಲಿ ಬಿಟ್ಟು ಬರಲಾಗುತ್ತದೆ. ಈಗಾಗಲೇ ಅಂದಾಜು 9-10 ನಾಯಿಗಳನ್ನು ಹಿಡಿಯಲಾಗಿದೆ. ಸಂಜೆಯವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ.

ಎಂ.ಎಸ್ ರಾಮಯ್ಯ ನಗರದಲ್ಲಿ ದಾರಿಯಲ್ಲಿ ಹೋಗುವರು ಮತ್ತು ಬರುವವರ ಮೇಲೆ ಎಗರಿ ಬೀಳುತ್ತಿದ್ದ ಬೀದಿ ನಾಯಿಗಳ ಕಾಟದಿಂದ ಈ ರಸ್ತೆಯಲ್ಲಿ ಜನರು ಓಡಾಡಲು ಹೆದರುವಂತಾಗಿತ್ತು. ಇದರಿಂದ ಮಹಾನಗರ ಪಾಲಿಕೆಗೆ ಹಿಡಿ ಶಾಪ ಹಾಕಿದ್ದರು. ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಪಾಲಿಕೆ ಬೆಳಿಗ್ಗೆ ಬೀದಿ ನಾಯಿಗಳನ್ನು ಹಿಡಿಯುವ ಸಿಬ್ಬಂಧಿಯ ಮೂಲಕ ಜನರನ್ನು ಬೆಚ್ಚಿ ಬೀಳಿಸಿದ್ದ ನಾಯಿಗಳನ್ನು ಹಿಡಿಯುವಲ್ಲಿ ನಿರತರಾಗಿದ್ದಾರೆ. ಇದರಿಂದ ಸಾರ್ವಜನಿಕರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಅಪರೇಷನ್ ಡಾಗ್ ! ಡಾಗ್ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ