ಹಿಂದೂ ನಾಯಕರ ಹತ್ಯೆಗೆ ಪಿಎಫ್ಐ ಕಾರಣ..?

Kannada News

17-08-2017

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ನಾಯಕರ ಹತ್ಯೆಗೆ ಪಿಎಫ್ಐ ಕಾರಣ, ಶರತ್ ಮಡಿವಾಳ ಅವರ ಹತ್ಯೆಯೂ ಪಿಎಫ್ಐಯಿಂದ ನಡೆದಿದೆ, ಆದ್ದರಿಂದ ಪಿಎಫ್ಐ ಹಾಗೂ ಎಸ್.ಡಿ.ಪಿ.ಐ ಸಂಘಟನೆಗಳನ್ನು ನಿಷೇಧಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಲವ್ ಜಿಹಾದ್ ನಡೆದಿರುವ ವರದಿ ಇದೆ, ಕರಾವಳಿ ರಾಜ್ಯದ ಲವ್ ಜಿಹಾದ್ ಪ್ರಕರಣಗಳನ್ನೂ ಎನ್.ಐ.ಎ ಮೂಲಕ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

ಇನ್ನು ಕಲ್ಲಡ್ಕ ಪ್ರಭಾಕರ ಭಟ್ ಅವರ ಶ್ರೀ ರಾಮ ಶಾಲೆಗೆ ಅನುದಾನ ಕಡಿತ ವಿಚಾರವಾಗಿ ಮಾತನಾಡಿದ ಅವರು, ದೇವಸ್ಥಾನದಿಂದ ಶಾಲೆಗಳಿಗೆ ಸಮವಸ್ತ್ರ,ಅಕ್ಕಿ ಧವಸಧಾನ್ಯ, ಕೊಡಲು 2004 ರಲ್ಲಿ ಆದೇಶ ಹೊರಡಿಸಲಾಗಿತ್ತು, ಧಾರ್ಮಿಕ ದತ್ತಿ ಇಲಾಖೆಯ ಕಾನೂನು ಮೀರಿ ಶಾಲೆಗೆ ಅನುದಾನವನ್ನು ನೀಡಿಲ್ಲ, ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ದ್ವೇಷ ಸಾಧನೆಯ ಭಾಗವಾಗಿ ಅನುದಾನ ಕಡಿತ ಮಾಡಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಪ್ರಭಾಕರ ಭಟ್ ಅವರನ್ನು ಟಾರ್ಗೆಟ್ ಮಾಡ್ತಾ ಬಂದಿದೆ, ಎರಡು ಶಾಲೆಗಳ ಮಕ್ಕಳ ಹೊಟ್ಟೆಗೆ ಹೊಡೆಯೋ ಕೆಲಸ ನಡೆಸಿದೆ ಎಂದು ಕಿಡಿಕಾರಿದರು. ಕಲ್ಲಡ್ಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಅಹಿಂದ ಹಿನ್ನೆಲೆಯವರು, ಆದರೆ ಸಿಎಂ ಭಾಷಣಕ್ಕೆ ಮಾತ್ರ ಅಹಿಂದ ಸೀಮಿತವಾಗಿದೆ ಎಂದರು.

ಇದಲ್ಲದೇ ಶಾಲೆಗಳಿಗೆ ಅನುದಾನ ಕಡಿತ ಮಾಡಿರುವುದರಿಂದ, ಸಂಸದೆ ಶೋಭಾ ಕರಂದ್ಲಾಜೆ ಅವರು ಮುಷ್ಠಿ ಅಕ್ಕಿ ಅಭಿಯಾನ ಆರಂಭಿಸಿದ್ದಾರೆ. ಭಿಕ್ಷೆ ಸ್ವೀಕಾರ ಮಾಡುವ ಮೂಲಕ ಶಾಲೆಯ ಮಕ್ಕಳಿಗೆ ಊಟ ನೀಡುವ ಅಭಿಯಾನ ಇದಾಗಿದೆ ಎಂದು ಇದೇ ವೇಳೆ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ