ಗೃಹಖಾತೆ ನೀಡಿದರೂ ನಿಭಾಯಿಸುವೆ..?

Kannada News

17-08-2017

ಕೊಪ್ಪಳ: ರೈತರು ಜಲಾಶಯದ ನೀರನ್ನು ಕೇಳುವುದು ಅವರ ಹಕ್ಕು. ಆದರೆ, ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲದ ಕಾರಣ ಕಾಲುವೆಗಳಿಗೆ ನೀರು ಹರಿಸಲಾಗುತ್ತಿಲ್ಲ, ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿಂದು ಮಾತನಾಡಿದ ಸಚಿವ ರಾಯರೆಡ್ಡಿ, ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸುವ ಕುರಿತಂತೆ ರೈತರು ಗಂಗಾವತಿ ಸೇರಿದಂತೆ ವಿವಿಧ ಭಾಗದಲ್ಲಿ ಪ್ರತಿಭಟನೆ ನಡೆಸಿರುವ ವಿಚಾರ ತಿಳಿದುಕೊಂಡಿದ್ದೇನೆ. ಕಾಲು ಫ್ಯಾಕ್ಚರ್ ಆಗಿದ್ದ ಕಾರಣ ಪ್ರತಿಭಟನಾ ನಿರತರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನೀರು ಕೇಳುವುದು ರೈತರ ಹಕ್ಕು. ಆದರೆ, ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲ. ಇರುವ ನೀರನ್ನು ಕುಡಿಯವ ನೀರಿನ ಉದ್ದೇಶಕ್ಕೆ ಉಳಿಸಿಕೊಂಡಿದ್ದೇವೆ. ಜಲಾಶಯಕ್ಕೆ ನೀರು ಬಂದರೆ ಬಿಡಲಾಗುವುದು ಎಂದರು.

ಈಗ ನಾನು ಉನ್ನತ ಶಿಕ್ಷಣ ಸಚಿವನಾಗಿ ಕೆಲಸ ಮಾಡುತ್ತಿರುವುದು ತೃಪ್ತಿ ಇದೆ. ಖಾತೆ ಹಂಚಿಕೆ ಸಿಎಂ ಅವರ ಪರಮಾಧಿಕಾರ. ಒಂದು ವೇಳೆ ಸಿಎಂ ಅವರು ಗೃಹ ಇಲಾಖೆಯ ಸಚಿವರನ್ನಾಗಿ ಮಾಡಿದರೆ, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ ಎಂದು ಸಚಿವ ಬಸವರಾಜ್ ರಾಯರೆಡ್ಡಿ ಇದೇ ಸಂದರ್ಭದಲ್ಲಿ ಹೇಳಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ