ಕಾಲುವೆಗೆ ನೀರು ಬಿಡಿ: ರೈತರ ಎಚ್ಚರಿಕೆ !

Kannada News

17-08-2017

ಬಳ್ಳಾರಿ: ಈ ತಿಂಗಳ 23 ರೊಳಗೆ ತುಂಗಭದ್ರ ಕಾಲುವೆಗಳಿಗೆ ನೀರು ಬಿಡದಿದ್ದರೆ, ಬಳ್ಳಾರಿ, ಕೊಪ್ಪಳ ಮತ್ತು ರಾಯಾಚೂರು ಜಿಲ್ಲೆಯ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಗಳಲ್ಲಿ, ಇದೇ ತಿಂಗಳ 24 ರಂದು, ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದೇವೆ ಎಂದು, ತುಂಗಭದ್ರ ರೈತ ಸಂಘ ಪ್ರಕಟಿಸಿದೆ. ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ. ತುಂಗಭದ್ರ ಜಲಾಶಯದಲ್ಲಿ 52 ಟಿಎಂಸಿಗೂ ಹೆಚ್ಚು ನೀರು ಸಂಗ್ರವಾಗಿದ್ದು, 8 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜೊತೆಗೆ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸಹ ಉತ್ತಮ ಮಳೆಯಾಗುತ್ತಿದೆ. ಆದ್ದರಿಂದ ಕೂಡಲೇ ರೈತರಿಗೆ ಸಹಕಾರಿಯಾಗುವ ರೀತಿಯಲ್ಲಿ, ಬಿತ್ತನೆಗೆ ಅವಶ್ಯವಾದ ನೀರನ್ನು ಕಾಲುವೆಗೆ ಬಿಡಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಆಗಸ್ಟ್ 24 ರಂದು ಈ ಭಾಗದ ಎಲ್ಲಾ ರಸ್ತೆಗಳನ್ನು, ಮೂರು ಜಿಲ್ಲೆಗಳಲ್ಲಿ ರೈತರು ಬಂದ್ ಮಾಡಲಿದ್ದಾರೆಂದು ಎಚ್ಚರಿಕೆ ನೀಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ