ಕಲ್ಲು ತೂರಾಟ ನಡೆಸಿ ದಾಂಧಲೆ !

Kannada News

16-08-2017

ಬೆಂಗಳೂರು: ಮೈಸೂರು ರಸ್ತೆಯ ಆಂಜಿನಪ್ಪ ಗಾರ್ಡನ್‍ ನಲ್ಲಿ, ಮನೆಗಳ ಮುಂಭಾಗ ನಿಲ್ಲಿಸಿದ ಕಾರು, ಟಾಟಾ ಏಸ್ ಸೇರಿ 5ಕ್ಕೂ ಹೆಚ್ಚು ವಾಹನಗಳ ಮೇಲೆ ಕಳೆದ ಮಧ್ಯರಾತ್ರಿ ದುಷ್ಕರ್ಮಿಗಳು, ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಪುಡಿ ಮಾಡಿ, ದಾಂಧಲೆ ನಡೆಸಿ ಪರಾರಿಯಾಗಿದ್ದಾರೆ. ಆಂಜಿನಪ್ಪ ಗಾರ್ಡನ್‍ ನ ಮನೆಗಳು ಮುಂಭಾಗ ರಸ್ತೆಗಳ ಪಕ್ಕ ನಿಲ್ಲಿಸಿದ್ದ 2 ಟಾಟಾ ಏಸ್ 1 ಕಾರು ಸೇರಿ 5ಕ್ಕೂ ಹೆಚ್ಚು ವಾಹನಗಳ ಮೇಲೆ ಮಧ್ಯರಾತ್ರಿ 2ರ ವೇಳೆ ಕಲ್ಲು ತೂರಾಟ ನಡೆಸಿ ಗಾಜು ಒಡೆದು ದಾಂಧಲೆ ನಡೆಸಿದ್ದಾರೆ.

ಆಂಜಿನಪ್ಪ ಗಾರ್ಡನ್‍ ನಲ್ಲಿ 15 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದುಷ್ಕರ್ಮಿಗಳು ಕ್ಯಾಮರಾ ಅಳವಡಿಸಿರುವ ಸ್ಥಳದಲ್ಲೇ ವಾಹನಗಳ ಗಾಜು ಪುಡಿ ಮಾಡಿದ್ದಾರೆ. ಸಿಸಿ ಕ್ಯಾಮರಾ ಇಲ್ಲದೆಡೆ ದುಷ್ಕರ್ಮಿಗಳು ವಾಹಗಳಿಗೆ ಯಾವುದೇ ಹಾನಿಯುಂಟು ಮಾಡಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಾಟನ್‍ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ