ಕದ್ದ ಬೈಕ್ 500 ರೂ. ಗೆ ಮಾರಾಟ !

Kannada News

16-08-2017

ಬೆಂಗಳೂರು: ಕುಡಿತದ ಚಟಕ್ಕಾಗಿ ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ಕೇವಲ 500ರಿಂದ 1000 ರೂಗಳಿಗೆ ಮಾರಾಟ ಮಾಡುತ್ತಿದ್ದ ಕಳ್ಳನೊಬ್ಬನನ್ನು ನಗರದ ಬಾಗಲಗುಂಟೆ ಪೊಲೀಸರು  ಬಂಧಿಸಿದ್ದಾರೆ. ಕಾಳಾಸ್ತ್ರಿ ನಗರದ ರಂಸ್ವಾಮಿ ಆಲಿಯಾಸ್ ರಂಗ (28) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಬಜಾಜ್, ಹೀರೊ ಹೋಂಡಾ, ಟಿವಿಎಸ್ ಹೋಂಡಾ ಆಕ್ಟೀವಾ ಸೇರಿದಂತೆ ವಿವಿಧ ಕಂಪನಿಗಳ 20 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಕುಡಿತದ ಚಟಕ್ಕಾಗಿ ಮನೆಗಳ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರವಾಹನಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ, ಈತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ.

ಆರೋಪಿಯು ಮದ್ಯಪಾನಕ್ಕಾಗಿ ಕಳವು ಮಾಡಿದ್ದ ದ್ವಿಚಕ್ರವಾಹನಗಳನ್ನು ಕೇವಲ 500 ರಿಂದ 1000 ರೂ.ವರೆಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಹಿಂದೆ ಕೂಡ ಆರೋಪಿ ಬೈಕ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಬಾಗಲಗುಂಟೆಯಲ್ಲಿ ನಡೆದ ಬೈಕ್ ಕಳವು ಪ್ರಕರಣವೊಂದರ ಬೆನ್ನು ಹತ್ತಿದ ಇನ್ಸ್ ಪೆಕ್ಟರ್ ವಿರೂಪಾಕ್ಷ ಸ್ವಾಮಿ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದೆ ಎಂದು ಡಿಸಿಪಿ ಚೇತನ್‍ ಸಿಂಗ್ ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ