ಮಳೆ ಅವಾಂತರ: ಬಿಎಂಟಿಸಿ ಸಿಬ್ಬಂದಿಗೆ ರಜೆ !

Kannada News

16-08-2017

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಎರಡು  ದಿನದಿಂದ ಸುರಿದ ಮಳೆಗೆ ಶಾಂತಿ ನಗರ ಬಸ್ ಡಿಪೋದಲ್ಲಿ ನೀರು ನಿಂತ ಪರಿಣಾಮ ಕೆಸರು ಗೆದ್ದೆಯಂತಾಗಿದೆ. ಡೀಸೆಲ್ ಬಂಕ್ ಗೆ ನೀರು ನುಗ್ಗಿ ಬಸ್ ಗಳ ಓಡಾಟಕ್ಕೆ ತೊಡಕಾಗಿದೆ. ಮಳೆಯ ಅವಾಂತರದಿಂದಾಗಿ ಕೆಲಸಕ್ಕೆ ತೊಡಕಾಗಿರುವ ಹಿನ್ನಲೆಯಲ್ಲಿ ಸುಮಾರು 1000 ಬಿಎಂಟಿಸಿ ಸಿಬ್ಬಂದಿಗೆ ರಜೆ ನೀಡಲಾಗಿದೆ. ಮಳೆಯ ಈ ಅವಾಂತರದಿಂದಾಗಿ ಬಿಎಂಟಿಸಿಗೆ ಅಂದಾಜು 5 ಕೋಟಿ ರೂ. ನಷ್ಟವಾಗಿದೆ ಎಂದು ಇಲಾಖೆ ಹೇಳಿದೆ. ಕಳೆದೆರಡು ದಶಕಗಳಲ್ಲೇ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ