ಎಟಿಂ ಯಂತ್ರಕ್ಕೆ ಕನ್ನ ಹಾಕಿದ ಖದೀಮರು !

Kannada News

16-08-2017

ಹುಬ್ಬಳ್ಳಿ: ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವ ಘಟನೆ, ಹಳೇ ಹುಬ್ಬಳ್ಳಿ ಬಳಿಯ, ಜನನಿಬಿಡ ಪ್ರದೇಶವಾದ ಕಲಘಟಗಿ ಕ್ರಾಸ್ ಬಳಿ ನಡೆದಿದೆ.

ಎಟಿಎಂ ಬಾಗಿಲು ಮುರಿದು ಒಳಗೆ ನುಗ್ಗಿದ್ದ ಕಳ್ಳರು ಮಷಿನ್‌ ಒಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ ಮಷಿನ್‌ ಅನ್ನು ಸರಿಯಾಗಿ ತೆಗೆಯಲಾಗಿಲ್ಲ. ಅಲ್ಲದೆ, ಅದನ್ನು ಹೊತ್ತೊಯ್ಯಲು ಯತ್ನಿಸಿದಾಗ ಅದೂ ಸಾಧ್ಯವಾಗದೇ ಬಾಗಿಲಿನ ಹೊರಗೆ ಮಷಿನ್‌ ಬಿಟ್ಟು ಪರಾರಿಯಾಗಿದ್ದಾರೆ.  ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಕಳ್ಳತನ ಯತ್ನ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದೂ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ