ಜೆಡಿಎಸ್ ಕೆರೆ ಇದ್ದಹಾಗೆ, ಕಾಂಗ್ರೆಸ್ ಸಮುದ್ರ..?

Kannada News

16-08-2017

ದೇವನಹಳ್ಳಿ: ಕಾಂಗ್ರೆಸ್ ಪಕ್ಷದ ಯುವರಾಜ, ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದರೇ, ಅತ್ತ ರಾಹುಲ್ ಗಾಂಧಿ ಭೇಟಿ ಮಾಡಲು ಜೆಡಿಎಸ್ ಪಕ್ಷದ ಬಂಡಾಯ ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದು, ಸಂಜೆ ೪ ಗಂಟೆಗೆ ಮರಳಿ ದೆಹಲಿಗೆ ತೆರಳಲಿದ್ದಾರೆ. ಆದರೆ ಜೆಡಿಎಸ್ ಬಂಡಾಯ ಶಾಸಕರ ಭೇಟಿಗೆ ರಾಹುಲ್ ಗಾಂಧಿ ನಾಳೆ ಸಮಯ ನಿಗದಿ ಮಾಡಿದ್ದು, ಹೀಗಾಗಿ ರಾಹುಲ್ ಗಾಂಧಿ ಬುಲಾವ್ ಹಿನ್ನಲೆ ಇಂದು 7 ಮಂದಿ ಜೆಡಿಎಸ್ ಶಾಸಕರು ಹಾಗೂ ಒರ್ವ ಮಾಜಿ ಎಂ.ಎಲ್‌.ಸಿ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ ನಡೆಸಲು ಜೆಡಿಎಸ್ ಬಂಡಾಯ ಶಾಸಕರಾದ ಜಮೀರ್ ಅಹಮದ್, ಚೆಲುವರಾಯಸ್ವಾಮಿ, ಬಾಲಕೃಷ್ಣ., ಭೀಮಾನಾಯಕ್, ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ, ಸೇರಿದಂತೆ ಮಾಜಿ ಎಂ.ಎಲ್.ಸಿ ರಾಮಕೃಷ್ಣ ಒಟ್ಟು 8 ಮಂದಿ ದೆಹಲಿಗೆ ಹೋಗುತ್ತಿದ್ದು, ನಾಳೆ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರ ಭೇಟಿ ಮಾಡುವುದಾಗಿ ತಿಳಿಸಿದರು. ಇದೇ ವೇಳೆ ಜೆಡಿಎಸ್ ಪಕ್ಷವನ್ನು, ಕರೆಗೆ ಹೋಲಿಸಿದ ಶಾಸಕ ಜಮೀರ್ ಅಹಮದ್, ಕಾಂಗ್ರೆಸ್ ಪಕ್ಷವನ್ನು ಸಮುದ್ರಕ್ಕೆ ಹೋಲಿಸಿ ವ್ಯಂಗ್ಯವಾಡಿದ್ದಾರೆ. ಇಷ್ಟು ದಿನ ಕೆರೆಯಲ್ಲಿ ಈಜಾಡುತ್ತಿದ್ವಿ, ಈಗ ಸಮುದ್ರದಲ್ಲಿ ಈಜೋಕೆ ತೆರಳುತ್ತಿದ್ದೀವಿ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ