ಕೊಪ್ಪಳದ ಗಂಗಾವತಿ ಬಂದ್ !

Kannada News

16-08-2017

ಕೊಪ್ಪಳ: ತುಂಗಾಭದ್ರಾ ಡ್ಯಾಂ ನಿಂದ, ಕೃಷಿಗಾಗಿ ನೀರು ಬಿಡದ ಹಿನ್ನೆಲೆ ಗಂಗಾವತಿ ನಗರ ಬಂದ್ ಮಾಡಿ, ಪ್ರತಿಭಟನೆ ನಡೆಸಿದ್ದಾರೆ. ರೈತರು ಮತ್ತು ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದೂ, ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ, ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಸರ್ಕಾರಿ ಬಸ್ ಗಳೂ ಸಹ ರಸ್ತೆಗಿಳಿಯದಿದ್ದೂ, ಮುಂಜಾಗ್ರತ ಕ್ರಮವಾಗಿ ಶಾಲಾಕಾಲೇಜುಗಳಿಗೆ ರಜೆ ನೀಡಲಾಗಿದೆ. ಪ್ರತಿಭಟನೆಯಲ್ಲಿ ನೂರಾರು ರೈತರು, ಸಾರ್ವಜನಿಕರು ವಿವಿಧ ಸಂಘಟನೆಗಳು ಭಾಗಿಯಾಗಿದ್ದಾರೆ. ನಗರದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

ಕೊಪ್ಪಳ ಕೊಪ್ಪಳದ ಗಂಗಾವತಿ ಬಂದ್ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ