ಡಿಕೆಶಿಯನ್ನು ಸಿಎಂ ಮಾಡಲಿ..?

Kannada News

12-08-2017

ಮಂಗಳೂರು: ಗೋರಕ್ ಪುರದಲ್ಲಿ 63 ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳಿಗೆ ಆಮ್ಲಜನಕ ನೀಡಲಾಗದ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. ಬರಪೀಡಿತ ಸ್ಥಳಕ್ಕೆ ಹೋಗದ ಸಿಎಂ ಸಿದ್ದರಾಮಯ್ಯ, ಸಮಯ ಇಲ್ಲದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾತ್ರಿ ನೀವು ಇಸ್ಪೀಟು ಆಡುತ್ತಿದ್ದೀರಾ? ನೀವು ಏನು ಮಹಾ ಸಾಧನೆ ಮಾಡಿದ್ದೀರಿ? ಕರ್ನಾಟಕವನ್ನು ಸಿಂಗಾಪುರ್ ಮಾಡುವುದಾಗಿ ಹೇಳಿದ್ದ ಎಸ್.ಎಂ ಕೃಷ್ಣ ಈ ಬಗ್ಗೆ ಪ್ರಯತ್ನಿಸಿದ್ದರು. ನಿಮಗೆ ಕಾಲ ಸನ್ನಿಹಿತ ಆಗುತ್ತಿದೆ. ಡಿ.ಕೆ.ಶಿವಕುಮಾರ್ ಪ್ರಬಲರಾಗುತ್ತಿದ್ದಾರೆ, ಡಿಕೆಶಿ ಮುಂದಿನ ಸಿಎಂ ಅಭ್ಯರ್ಥಿ, ನಿದ್ರೆಯಿಂದ ಎಚ್ಚರವಾಗದಿದ್ದರೆ ನಿಮಗೆ ಕಷ್ಟವಾಗಬಹುದು ಎಂದರು. ಬಳ್ಳಾರಿ ಪಾದಯಾತ್ರೆಯಲ್ಲಿ ನಾನೂ ಭಾಗವಹಿಸಿದ್ದೆ ನಿಮ್ಮ ಗಡಸುತನ ಏನಾಯಿತು? ಅಮಿತ್ ಷಾ ರಾಜ್ಯಕ್ಕೆ ಬಂದಿದ್ದು, ನಿಮ್ಮನ್ನು ಕೆಳಗಿಳಿಸಲಿದ್ದಾರೆ. 16 ರಾಜ್ಯಗಳಲ್ಲೂ ಅಮಿತ್ ಷಾ ಸಿಎಂ ಬದಲಾವಣೆಗೆ ಕಾರಣರಾಗಿದ್ದಾರೆ. ಸಂಜೆ ಒಳಗೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ದಲಿತ ಸಿಎಂ ಅಥವಾ ಡಿಕೆಶಿಯನ್ನು ಸಿಎಂ ಮಾಡಲಿ ಎಂದು ಹೇಳಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ