ಎತ್ತಿನ ಬಂಡಿಗೆ ಕಾರು ಡಿಕ್ಕಿ !

Kannada News

12-08-2017

ರಾಯಚೂರು: ಇನ್ನೋವಾ ಕಾರೊಂದು ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ, ಒಂದು ಎತ್ತು ಸಾವನ್ನಪ್ಪಿದ್ದು, ಇಬ್ಬರು ಮಾರಣಾಂತಿಕವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸಂಭವಿಸಿದೆ. ರಾಯಚೂರಿನಿಂದ ಮಾನ್ವಿಗೆ ಬರುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಇನ್ನು ಅದೇ ದಾರಿಯಲ್ಲಿ ಎದುರಿಗೆ ಬರುತ್ತಿದ್ದ, ಎತ್ತಿನ ಬಂಡಿಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನ ವೇಗಕ್ಕೆ ಬಂಡಿ ಸಮೇತ ನೂರಾರು ಅಡಿ ದೂರದವರೆಗೆ ಎಳೆದುಕೊಂಡುಬಂದಿದೆ. ಅಲ್ಲದೇ ರಸ್ತೆಬದಿಯಲ್ಲಿದ್ದ ಹೊಟಲ್ ಗೆ ವಾಹನ ನುಗ್ಗಿದ್ದರಿಂದ ಹೊಟೆಲ್ ಜಖಂಗೊಂಡಿದೆ. ಘಟನೆಯಲ್ಲಿ ಸ್ಥಳದಲ್ಲೇ ಒಂದು ಎತ್ತು ಮೃತಪಟ್ಟಿರೆ, ವಾಹನ ಚಾಲಕ ಹಾಗೂ ಬಂಡಿಯಲ್ಲಿದ್ದ ರೈತ ಮಾರಣಾಂತಿಕವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಇತರೇ ಮೂರುಜನ ಮಹಿಳೆಯರಿಗೆ ಸಣ್ಣಪುಟ್ಟಗಾಯಗಳಾಗಿವೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ