ಅಕ್ರಮ ಸಂಬಂಧಕ್ಕಾಗಿ ಗಂಡನನ್ನೇ ಕೊಂದಳಾ…?

Kannada News

12-08-2017

ಮೈಸೂರು: ಮೈಸೂರಿನ ಟಿ.ನರಸೀಪುರ ಪಟ್ಟಣದ, ಕರವಟ್ಟಿಯ, ಕಪಿಲ ನದಿ ದಡದ ಬಳಿ ಮೃತ ದೇಹವೊಂದು ಪತ್ತೆಯಾಗಿದೆ. ಉಮೇಶ್ (೪೦)ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿಯೆ, ಪತಿಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದಷ್ಟೇ, ಮೀನಾ ಅವರು, ತನ್ನ ಪತಿ ಉಮೇಶ್ ಕಾಣೆಯಾಗಿದ್ದಾರೆಂದು, ಟಿ.ನರಸೀಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೀನ ಅವರು ನೀಡಿದ ದೂರಿನ ಬಗ್ಗೆ ಶಂಕೆಗೊಂಡ ಪೊಲೀಸರು, ಪ್ರಕರಣ ತನಿಖೆ ಆರಂಭಿಸಿದಾಗ, ತಿನೇತ್ರ ಎಂಬಾತನ ಜೊತೆ ಮೀನಾ ಅಕ್ರಮ ಸಂಬಂದ ಹೊಂದಿದ್ದರು ಎಂದು ಹೇಳಲಾಗುತ್ತಿದ್ದೂ, ಮೀನಾ ತನ್ನ ಪ್ರಿಯಕರ ತ್ರಿನೇತ್ರ, ಎಂಬಾತನ  ಜೊತೆಗೂಡಿ ಕೊಲೆ ಮಾಡಿರುವುದಾಗಿ, ಉಮೇಶ್ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರಕರಣ ಟಿ. ನರಸೀಪುರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದೂ, ಸಂಪೂರ್ಣ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಹೊರಬರಲಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ