ಗೋಡೆ ಕುಸಿದು ತಾಯಿ-ಮಗು ದುರ್ಮರಣ !

Kannada News

12-08-2017

ಗದಗ: ಭಾರಿ ಗಾಳಿ-ಮಳೆಗೆ, ಮನೆ ಗೋಡೆ ಕುಸಿದು ಬಿದ್ದು, ತಾಯಿ ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಗದಗದಲ್ಲಿ ನಡೆದಿದೆ. ಜಿಲ್ಲೆಯ ರೋಣ ತಾಲ್ಲೂಕಿನ, ಅಬ್ಬಿಗೇರಿ ಗ್ರಾಮದಲ್ಲಿ  ಘಟನೆ ಸಂಭವಿಸಿದೆ. ನಿರ್ಮಲಾ ಕೆಂಗಾರ(30), ಸರಸ್ವತಿ ಕೆಂಗಾರ (8) ಮೃತ ದುರ್ದೈವಿ ಗಳು. ಜಿಲ್ಲೆಯಲ್ಲಿ ತಡರಾತ್ರಿ, ಭಾರೀ ಗಾಳಿಸಹಿತ ಮಳೆ ಸುರಿದಿದ್ದೂ, ಅಬ್ಬಿಗೇರಿಯ ಗ್ರಾಮದ ನಿವಾಸಿ, ನಿರ್ಮಲಾ ಕೆಂಗಾರ ಎಂಬುವರು, ತಮ್ಮ ಮಗಳೊಂದಿಗೆ ಮನೆಯಲ್ಲಿ ಮಲಗಿದ್ದೂ, ಜೋರಾಗಿ ಸುರಿಯುತ್ತಿದ್ದ ಮಳೆಗೆ, ಏಕಾಏಕಿ ಗೋಡೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.  ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ