ಅನುದಾನ ರದ್ದು: ಇದರಲ್ಲಿ ತಪ್ಪೇನಿಲ್ಲ..?

Kannada News

12-08-2017 496

ಬೆಂಗಳೂರು: ಕಲ್ಲಡ್ಕ ಪ್ರಭಾಕರ ಭಟ್  ಆಡಳಿತದ ಶಾಲೆ, ಕಾನೂನು ಮೀರಿ ಮುಜರಾಯಿ ದೇವಾಲಯಕ್ಕೆ ಸೇರಿದ ಹಣವನ್ನು ಪಡೆಯುತ್ತಿದೆ. ಹೀಗಾಗಿ ಸರ್ಕಾರ ಪ್ರಭಾಕರ ಭಟ್ ಅವರಿಗೆ ಸೇರಿದ ಎರಡು ಶಾಲೆಗಳಿಗೆ ಅನುದಾನ ನಿಲ್ಲಿಸಿದೆ. ಇದರಲ್ಲಿ ತಪ್ಪೇನಿಲ್ಲ. ಕಾನೂನು ಪ್ರಕಾರವೇ ಕ್ರಮಕೈಗೊಳ್ಳಲಾಗಿದೆ ಎಂದು, ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ ಭಟ್ ಅವರ ಅಧ್ಯಕ್ಷತೆಯ, ಶ್ರೀರಾಮ ವಿದ್ಯಾ ಕೇಂದ್ರ ಮತ್ತು ಶ್ರೀದೇವಿ ವಿದ್ಯಾ ಕೇಂದ್ರಗಳಿಗೆ, ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಅನುದಾನವನ್ನು ಸರ್ಕಾರ ಸ್ಥಗಿತಗೊಳಿಸಿದೆ. ಇದು ಕಾನೂನು ಪ್ರಕಾರವೇ ಕೈಗೊಂಡ ಕ್ರಮವಾಗಿದೆ ಎಂದರು. ಈ ಕುರಿತು ನಿನ್ನೆಯಷ್ಟೇ ಶಾಲಾ ವಿದ್ಯಾರ್ಥಿಗಳು, ಪೋಷಕರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.

ಇನ್ನು ರಾಜ್ಯದ ಕೊಡಗು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ, ಕಾಡಾನೆ ಧಾಂದಲೆ ನಿವಾರಣೆ ನಿಟ್ಟಿನಲ್ಲಿ, ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ, ಕಾಡಾನೆ ದಾಂಧಲೆ ತಡೆಗೆ ರೇಲ್ವೆ ಕಂಬಿಗಳನ್ನು, ಬೇಲಿ ಅಳವಡಿಕೆ, ಕಂದಕಗಳ ನಿರ್ಮಾಣ, ಸೇರಿದಂತೆ ಸೂಕ್ತ ಮಾರ್ಗೋಪಾಯಗಳ ಯೋಜನೆ ಜಾರಿಯಲ್ಲಿದೆ ಎಂದರು.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ