ಡಿಕೆಶಿಯಷ್ಟು ಅಕ್ರಮ ನಡೆಸೋರು ಜಗತ್ತಿನಲ್ಲಿಯೇ ಇಲ್ಲ..?

Kannada News

11-08-2017

ಧಾರವಾಡ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿರುವುದಾಗಿ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 197 ಪುಟಗಳ ದಾಖಲೆ ಸಮೇತ, 5 ಪುಟಗಳ ಸುದೀರ್ಘ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಗಾಲಿ ಜನಾರ್ಧನರೆಡ್ಡಿ ಸೊಕ್ಕು ಮುರಿದಂತೆ ಡಿಕೆಶಿ ಪ್ರಕರಣದಲ್ಲಿಯೂ ಆಗಲಿ ಎಂದು ಹೇಳಿದ್ದಾರೆ. 'ಕನಕಪುರ ರಿಪಬ್ಲಿಕ್' ಕಟ್ಟಿಕೊಂಡಿರೋ ಡಿಕೆಶಿ, ಇವರಷ್ಟು ಅಕ್ರಮ ನಡೆಸೋರು ಜಗತ್ತಿನಲ್ಲಿಯೇ ಇಲ್ಲ ಎಂದು ಆರೋಪಿಸಿದ್ದಾರೆ.  ಡಿಕೆಶಿ 'ಕನಕಪುರ ರಿಪಬ್ಲಿಕ್' ಕಟ್ಟಿಕೊಂಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ, ಸ್ವಜನ ಪಕ್ಷಪಾತದಿಂದ ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು. 'ಬಳ್ಳಾರಿ ರಿಪಬ್ಲಿಕ್'ನ್ನು ಚೂರು ಚೂರು ಮಾಡಿದಂತೆಯೇ 'ಕನಕಪುರ ರಿಪಬ್ಲಿಕ್'ನ್ನೂ ಮಾಡಬೇಕಿದೆ, ಡಿಕೆಶಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದರು. ನಾಚಿಕೆ, ಮಾನ-ಮರ್ಯಾದೆ ಇದ್ದರೆ ಡಿಕೆಶಿ ರಾಜೀನಾಮೆ ಕೊಡಬೇಕು ಎಂದು ನೇರವಾಗಿ ಹೇಳಿದ್ದಾರೆ. ಇಂಥ ಭ್ರಷ್ಟರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದು ಆಗ್ರಹಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ