ಮುಂದುವರೆದ, ಯಡ್ಡಿ ಪಿಎ ವಿಚಾರಣೆ !

Kannada News

11-08-2017

ಬೆಂಗಳೂರು: ಈಶ್ವರಪ್ಪ ಅಪ್ತಸಹಾಯಕ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಡಿಯೂರಪ್ಪ ಪಿ ಎ ಸಂತೋಷ್‍ ನ ವಿಚಾರಣೆಯನ್ನು ಇಂದೂ ಕೂಡ ನಡೆಸಲಾಗಿದೆ. ಗುರುವಾರ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸಂಜೆ 7 ಗಂಟೆಯವರೆಗೆ ವಿಚಾರಣೆ ನಡೆಸಲಾಗಿತ್ತು. ಸಂತೋಷ್ ಅವರನ್ನು ಎಸಿಪಿ ಬಡಿಗೇರ್ ನೇತೃತ್ವದ ತಂಡ ವಿಚಾರಣೆ ನಡೆಸಿದ್ದು, ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 75 ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ತಿಳಿದು ಬಂದಿದೆ. ಶುಕ್ರವಾರ ಕೂಡ ವಿಚಾರಣೆ ಮುಂದುವರಿಯಲಿದ್ದು, ಆಡಿಯೋ ಸಂಭಾಷಣೆ ಇಟ್ಟುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ