ಎರಡು ಬೈಕ್ ಮುಖಾಮುಖಿ ಡಿಕ್ಕಿ !

Kannada News

11-08-2017

ಬೆಂಗಳೂರು: ಕಗ್ಗದಾಸನಪುರ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಲೆಕ್ಕಾಧಿಕಾರಿಯೊಬ್ಬರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ವೈಟ್ ಫೀಲ್ಡ್ ನ ನೋವಾ ನೋಟೀಸ್ ಕಂಪನಿಯ ಲೆಕ್ಕಾಧಿಕಾರಿ ಅಬ್ಬಾ ಸಾಹೇಬ್ ಬಿರಾದಾರ್(30)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಕೈಮುರಿದಿರುವ ಮತ್ತೊಬ್ಬ ಬೈಕ್ ಸವಾರ ಕೇರಳ ಮೂಲದ ವಿಷ್ಣು(28) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಗ್ಗದಾಸನಪುರ ಮುಖ್ಯರಸ್ತೆಯಲ್ಲಿ ಬೆಳಿಗ್ಗೆ 8.15ರ ವೇಳೆ ಅಬ್ಬಾ ಸಾಹೇಬ್ ಬಿರಾದಾರ್ ಅವರು ಪಲ್ಸರ್ ಬೈಕ್‍ ನಲ್ಲಿ ವೇಗವಾಗಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಹೆಲ್ಮೆಟ್ ಹಾಕಿರದ ಅಬ್ಬಾ ಸಾಹೇಬ್ ಬಿರಾದಾರ್ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಲ್ಮೆಟ್ ಧರಿಸಿದ್ದ ಮತ್ತೊಂದು ಬೈಕ್ ವಿಷ್ಣುಗೆ ಕೈ ಮುರಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿಯ ಸಾಂಗ್ಲಿ ಮೂಲದ ಬಿರಾದಾರ್ ಕಗ್ಗದಾಸನಪುರದಲ್ಲಿ ಮನೆ ಮಾಡಿಕೊಂಡಿದ್ದೂ,. ವಿಷ್ಣು ಬಾಗಮನೆ ಟೆಕ್ ಪಾರ್ಕ್‍ನಲ್ಲಿ ಉದ್ಯೋಗಿ ಯಾಗಿದ್ದರು ಎಂದು ತಿಳಿದು ಬಂದಿದೆ. ಇಂದಿರಾನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ