ಮೀನುಗಾರರಿಗೆ ಪರಿಹಾರ ಧನ ಹೆಚ್ಚಳ !

Kannada News

11-08-2017

ಬೆಂಗಳೂರು: ಮೀನುಗಾರರ ಮರಣ ಪ್ರಕರಣಗಳಿಗೆ ಸಂಕಷ್ಟ ಪರಿಹಾರ ನಿಧಿ ಮೊತ್ತವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೀನುಗಾರರು ಮರಣಹೊಂದಿದರೆ ಈಗ ನೀಡುತ್ತಿದ್ದ 2 ರಿಂದ 3 ಲಕ್ಷಕ್ಕೆ, ಮತ್ತು ಸಮುದ್ರದಲ್ಲಿ ಮರಣಹೊಂದಿದ  ಪ್ರಕರಣಗಳಿಗೆ 5 ರಿಂದ 6 ಲಕ್ಷಕ್ಕೆ ಏರಿಸಲು ನಿರ್ಧರಿಸಿದೆ. ಅಲ್ಲದೇ ಬಲೆ ಮತ್ತು ಆಸ್ತಿ ಹಾನಿ, ದೋಣಿ ಹಾನಿ ಪ್ರಕರಣಗಳಿಗೆ 50 ಸಾವಿರ ರೂ ನಿಂದ 1 ಲಕ್ಷಕ್ಕೆ ಏರಿಸಲಾಗಿದೆ. ವೈದ್ಯಕೀಯ ವೆಚ್ಚವನ್ನು 50 ಸಾವಿರ ರೂ ನಿಂದ 1 ಲಕ್ಷಕ್ಕೆ, ವಿಮೆ ಪರಿಹಾರ ಪಡೆಯದ ಪ್ರಕರಣಗಳಿಗೆ 80 ಸಾವಿರದಿಂದ 1.20 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ಹೊಸದಾಗಿ ಪುನರ್ ರಚನೆಯಾದ, ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸಭೆಯಲ್ಲಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಮುದ್ರದಲ್ಲಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಪ್ರಾಣ ರಕ್ಷಣೆ ಮಾಡಿದ ಮೀನುಗಾರರಿಗೆ ಹಾಗೂ ಪ್ರಾಣ ರಕ್ಷಣೆ ಮಾಡಿದ ದೋಣಿಯ ತಾಂಡೇಲರಿಗೆ ಶೌರ್ಯ ಪ್ರಶಸ್ತಿಯ ಜೊತೆಗೆ ರೂ. 50,000/- ಪುರಸ್ಕಾರ ನೀಡಿ ಗೌರವಿಸಲು ನಿರ್ಣಯಿಸಲಾಗಿದೆ. ಅದೇ ರೀತಿ ಯಾಂತ್ರೀಕೃತ ದೋಣಿ ಮಾಲೀಕರು ಪಡೆಯುತ್ತಿರುವ ಡಿಸೇಲ್ ಮೇಲಿನ ಮಾರಾಟ ಕರ ಮರುಪಾವತಿ ಸಹಾಯಧನದಲ್ಲಿ ಶೇ. 1.5 ಬದಲಿಗೆ ಶೇ 1 ರಷ್ಟು ಮೊತ್ತವನ್ನು ಮಾತ್ರ ಸಂಕಷ್ಟ ಪರಿಹಾರ ನಿಧಿಗೆ ಪಾವತಿಸಲು ಸಭೆ ನಿರ್ಧರಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ