ಖತರ್ನಾಕ್ ಮನೆಗಳ್ಳನ ಬಂಧನ !

Kannada News

11-08-2017

ಮಂಡ್ಯ: ಖತರ್ನಾಕ್ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಮಂಡ್ಯದ ಹಲಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೀಫ್ ಪಾಷಾ(೬೫) ಬಂಧಿತ ಆರೋಪಿ. ಬಂಧಿತನಿಂದ ಸುಮಾರು 13ಲಕ್ಷ ಮೌಲ್ಯದ 450 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಯಾರು ಇಲ್ಲದ ವೇಳೆ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಆರೀಫ್ ಪಾಷಾ, ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಈತನ ಮೇಲೆ ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣ ದಾಖಲಾಗಿದ್ದೂ, ಕಳ್ಳತನ ಮಾಡಿ ತಲೆಮರೆಸಿಕೊಳ್ಳುತ್ತಿದ್ದ ಆರೋಪಿಯ ಪತ್ತೆಗಾಗಿ, ಡಿ.ವೈ.ಎಸ್.ಪಿ ಮಲ್ಲಿಕ್, ಸಿಪಿಐ ಶಿವಮಲ್ಲವಯ್ಯ, ಪಿ.ಎಸ್.ಐ ಶ್ರೀಧರ್ ನೇತೃತ್ವದ ತಂಡ ಬಲೆ ಬೀಸಿತ್ತು. ಕಳೆದ ಕೆಲ ದಿನಗಳಿಂದ ಕಾರ್ಯಾಚರಣೆ ನಡೆಸಿ, ಕಳ್ಳನನ್ನು ಹಿಡಿಯುವಲ್ಲಿ ಹಲಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

ಮಂಡ್ಯ ಖತರ್ನಾಕ್ ಮನೆಗಳ್ಳನ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ