ದೇವಸ್ಥಾನ ಹುಂಡಿ ಒಡೆದು ಕಳ್ಳತನ !

Kannada News

11-08-2017

ಧಾರವಾಡ: ದೇವಸ್ಥಾನ ಹುಂಡಿ ಒಡೆದು ಅಪಾರ ಪ್ರಮಾಣದ ಹಣ ಕೊಳ್ಳೆಹೊಡೆದಿರುವ ಘಟನೆಯು, ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲ್ಲೂಕಿನ ಕೊಟಬಾಗಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಹುಂಡಿ ಒಡೆದು ಈ ದುಷ್ಕೃತ್ಯ ಎಸಗಿದ್ದಾರೆ. ಸುಮಾರು ಒಂದು ವರ್ಷದಿಂದ ಹುಂಡಿ ತೆಗೆಯದೇ ಹಣ ಕೂಡಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಅಲ್ಲದೇ ಸೋಮವಾರ ಹುಂಡಿ ತೆಗೆಯುವ ಕಾರ್ಯಕ್ರಮ‌ ಇದ್ದೂ, ಅಷ್ಟರಲ್ಲೇ ಕಳ್ಳಕಾಕರ ಕೆಟ್ಟ ದೃಷ್ಟಿ ದೇವಸ್ಥಾನದ ಹುಂಡಿಯ ಮೇಲೆ ಬಿದ್ದಿದ್ದೂ, ಹಣ ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗರಗ ಪೊಲೀಸರು ಪರಿಶೀಲನೆ ನಡೆಸಿ. ಪ್ರಕರಣ ದಾಖಲಿಸಿಕೊಂಡಿದ್ದೂ, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ