ಮೈಸೂರು ದಸರಾ: ಗಜಪಯಣಕ್ಕೆ ಭರದ ಸಿದ್ಧತೆ

Kannada News

11-08-2017

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ-2017ರ ಮಹೋತ್ಸವ, ಹಿನ್ನೆಲೆಯಲ್ಲಿ ನಾಳೆ ಕಾಡಿನಿಂದ ನಾಡಿನತ್ತ, ಜಂಬೂಸವಾರಿ ಆನೆಗಳು ಬರಲಿವೆ. ನಾಳೆ ದಸರಾದ ಮೊದಲ ಕಾರ್ಯಕ್ರಮವಾದ ಗಜಪಯಣಕ್ಕೆ ಚಾಲನೆ ದೊರೆಯಲಿದೆ. ನಾಗರಹೊಳೆ ಅಭಯಾರಣ್ಯದಂಚಿನಲ್ಲಿರುವ, ವೀರನಹೊಸಹಳ್ಳಿ ಬಳಿಯ ನಾಗಾಪುರ ಹಾಡಿಯ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಗಜಪಯಣ ಕಾರ್ಯಕ್ರಮ ನಡೆಯಲಿದ್ದೂ, ನಾಳೆ ಬೆಳಿಗ್ಗೆ 11ಕ್ಕೆ  ಕಾಡಿನಿಂದ ನಾಡಿನತ್ತ 8 ಆನೆಗಳ ತಂಡ ಹೆಜ್ಜೆ ಹಾಕಲಿವೆ. ಅರ್ಜುನ ನೇತೃತ್ವದಲ್ಲಿ ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ, ಕಾವೇರಿ, ಭೀಮಾ ಹಾಗೂ ವರಲಕ್ಷ್ಮಿ ಆನೆಗಳು ನಾಡಿನತ್ತ ಆಗಮಿಸಲಿವೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರು, ನಾಳೆ ಗಜಪಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ