ಬೈಕ್ ಗೆ ಬಸ್ ಡಿಕ್ಕಿ ವ್ಯಕ್ತಿ ಸಾವು !

Kannada News

10-08-2017

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದ್ದೂ, ಬೈಕ್ ಸವಾರ ಸಾವನ್ನಪ್ಪಿರಿವ ಘಟನೆ, ನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು, ರಿಲಿಗೇರ್ ಹೆಲ್ತ್ ಇನ್ಷೂರೆನ್ಸ್ ಕಂಪನಿ ಮ್ಯಾನೇಜರ್ ಲೋಕೇಶ್ ಎಂದು(24) ಗುರುತಿಸಲಾಗಿದೆ. ಈತ ನಂದಿನಿ ಲೇಔಟ್‍ನ ನಿವಾಸಿಯಾಗಿ ಎಂದು ತಿಳಿದು ಬಂದಿದೆ. ಲೋಕೇಶ್ ಅವರು ಬೆಳಿಗ್ಗೆ 9.45 ರ ವೇಳೆ ಪತ್ನಿಯನ್ನು ಕಚೇರಿಗೆ ಬಿಟ್ಟು ತಾವು ಕೆಲಸಕ್ಕೆ ಬೈಕ್ ಲ್ಲಿ ಹೋಗುತ್ತಿದ್ದಾಗ ಡಾ. ರಾಜ್ ಕುಮಾರ್ ರಸ್ತೆಯ ವರದರಾಜ ಪೆಟ್ರೋಲ್ ಬಂಕ್ ಬಳಿ, ಹಿಂದಿನಿಂದ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಲೋಕೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಲೋಕೇಶ್ ಅವರಿಗೆ ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿತ್ತು. ಪ್ರಕರಣ ದಾಖಲಿಸಿರುವ ಮಲ್ಲೇಶ್ವರಂ ಸಂಚಾರ ಪೊಲೀಸರು, ಬಸ್ ಚಾಲಕ ಬಸವರಾಜ್ ನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಎಸಿಪಿ ಜಗದೀಶ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ