ವಿಚಾರಣೆಗೆ ಹಾಜರಾದ ಯಡಿಯೂರಪ್ಪ ಪಿಎ !

Kannada News

10-08-2017

ಬೆಂಗಳೂರು: ಈಶ್ವರಪ್ಪ ಅಪ್ತಸಹಾಯಕ ವಿನಯ್ ಮೇಲೆ ಹಲ್ಲೆ ಮತ್ತು ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್‍ ನನ್ನು, ಎ.ಸಿ.ಪಿ ಬಡಿಗೇರ್ ನೇತೃತ್ವದ ತನಿಖಾಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು. ಎರಡು ದಿನಗಳ ಹಿಂದೆ ಸಂತೋಷ್‍ ಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆಗಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸಂತೋಷ್ ಅವರನ್ನು  ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾತೋರ್ ಮತ್ತು ತನಿಖಾಧಿಕಾರಿಯೂ ಆಗಿರುವ ಎಸಿಪಿ ಬಡಿಗೇರ್ ವಿಚಾರಣೆ ನಡೆಸಿದರು. ಈಶ್ವರಪ್ಪ ಪಿಎ ವಿನಯ್ ಕಾರು ಅಡ್ಡಗಟ್ಟಿ ಅಪಹರಣಕ್ಕೆ ಯತ್ನಿಸಲಾಗಿತ್ತು. ಮೇ11 ರಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ವಿನಯ್ ದೂರು ನೀಡಿದ್ದರು. ಈ ಸಂಬಂಧ ಸಂತೋಷ್ ವಿಚಾರಣೆ ನಡೆಯುತ್ತಿದ್ದು, ಅವರ ಹೇಳಿಕೆಗಳನ್ನು ವಿಡಿಯೋ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ