ಬೈಕ್ ಗೆ ಟ್ಯಾಂಕರ್ ಡಿಕ್ಕಿ ಮಹಿಳೆ ಸಾವು !

Kannada News

10-08-2017

ಬೆಂಗಳೂರು: ನಗರದ ವೈಟ್‍ ಫೀಲ್ಡ್ ನ,  ಚನ್ನಸಂದ್ರ ರಸ್ತೆಯಲ್ಲಿ ಕಳೆದ ರಾತ್ರಿ ಹಿಂದಿನಿಂದ ಬಂದ ವಾಟರ್ ಟ್ಯಾಂಕರ್, ಬೈಕ್‍ ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್‍ ನ ಹಿಂಬದಿ ಕುಳಿತಿದ್ದ, ಅಕ್ಕ ಮೃತಪಟ್ಟರೆ, ಸಣ್ಣಪುಟ್ಟ ಗಾಯಗಳೊಂದಿಗೆ ತಮ್ಮ ಪಾರಾಗಿರುವ ದುರ್ಘಟನೆ ನಡೆದಿದೆ. ಮೃತಪಟ್ಟವರನ್ನು ನಾಗೊಂಡನಹಳ್ಳಿಯ ಕವಿತಾ (37) ಎಂದು ಗುರುತಿಸಲಾಗಿದೆ. ಕವಿತಾ ಅವರ ತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾತ್ರಿ 8.15ರ ವೇಳೆ ಚಾಮರಾಜನಗರದಿಂದ ಬಂದಿದ್ದ ಕವಿತಾ ಅವರನ್ನು, ಅವರ  ತಮ್ಮ ಬೈಕ್ ನಲ್ಲಿ ಕರೆದುಕೊಂಡು ನಾಗೊಂಡನಹಳ್ಳಿಯ ಮನೆಗೆ ಹೋಗುತ್ತಿದ್ದೂ, ಮಾರ್ಗ ಮಧ್ಯೆ ಚನ್ನಸಂದ್ರ ರಸ್ತೆಯಲ್ಲಿ ಹಿಂದಿನಿಂದ ಬಂದ ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂಬದಿ ಕುಳಿತಿದ್ದ ಕವಿತಾ ಅವರ ಮೇಲೆ, ಟ್ಯಾಂಕರ್ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೈಟ್‍ ಫೀಲ್ಡ್  ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದೂ ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ