ನಾಲೆಗಳಿಗೆ ನೀರು: ವಿಶೇಷ ಪೂಜೆ !

Kannada News

10-08-2017

ಮಂಡ್ಯ: ಕೆ.ಆರ್.ಎಸ್.ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಮಧ್ಯ ರಾತ್ರಿಯಿಂದಲೇ ನೀರು ಬಿಡುಗಡೆ ಮಾಡಿದ್ದೂ, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ವಿಶ್ವೇಶ್ವರಯ್ಯ, ವಿರಿಜಾ, ಚಿಕ್ಕ ದೇವರಾಯ, ವರುಣಾ, ಆರ್.ಬಿ.ಎಲ್.ಎಲ್ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ. ಸುಮಾರು ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದೂ, ನಾಲೆಗಳು ಮತ್ತು ನದಿ ಎರಡೂ ಸೇರಿ, ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಆದೇಶದಂತೆ ನಾಲೆಗಳಿಗೆ ನೀರು ಪೂರೈಸಲಾಗುತ್ತಿದೆ.

ಇನ್ನು ನಾಲೆಗಳಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು, ಕಾವೇರಿ ನದಿಗೆ ವಿಶೇಷ ಪೂಜೆ, ಬಾಗೀನ ಅರ್ಪಿಸಿದ್ದಾರೆ. ಪಾಂಡವಪುರ ತಾಲ್ಲೂಕಿನ ಕಟ್ಟೇರಿ ಬಳಿ, ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಮಂಡ್ಯದತ್ತ ಕಾವೇರಿ ಸದಾ ಬೋರ್ಗರೆಯಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ನಾಲೆಗಳಿಗೆ ನೀರು ಹರಿಸುವಂತೆ ಅಹೋರಾತ್ರಿ ಚಳವಳಿ ನಡೆಸಿದ್ದ ರಮೇಶ್ ಗೌಡ ಹಾಗೂ ಕಾರ್ಯಕರ್ತರು, ಮಂಡ್ಯದ ಮದ್ದೂರಮ್ಮ ಕೆರೆ ಆವರಣದಲ್ಲಿ 34 ದಿನಗಳಿಂದ ನಿರಂತರ ಹೋರಾಟ ನಡೆಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ