ಕೂಲಿ ಕಾರ್ಮಿಕರಿಗೆ ಇರಿದ ದುಷ್ಕರ್ಮಿಗಳು !

Kannada News

09-08-2017

ಬೆಂಗಳೂರು: ನಗರದ ಹೊರವಲಯದ ಅವಲಹಳ್ಳಿಯಲ್ಲಿ ಕಳೆದ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ನಡೆದು ಹೋಗುತ್ತಿದ್ದ ಮೂವರು ಕೂಲಿ ಕಾರ್ಮಿಕರನ್ನು, ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಮೊಬೈಲ್, ಪರ್ಸ್ ಕಸಿದು ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ಗಾಯಗೊಂಡಿರುವ ಕೂಲಿ ಕಾರ್ಮಿಕರಾದ ಅವಲಹಳ್ಳಿಯ ನವೀನ್(23) ಆಂಧ್ರ ಮೂಲದ ಬಾಬು(26)ನರೇಂದ್ರ(24)ರನ್ನು ಮಣಿಪಾಲ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಲಹಳ್ಳಿ ಹಾಗೂ ಹಿರಂಡಹಳ್ಳಿ ಗ್ಲಾಸ್ ಪ್ಯಾಕ್ಟರಿ ಬಳಿಯ ರಸ್ತೆಯಲ್ಲಿ ರಾತ್ರಿ 9.30ರ ವೇಳೆ ನಡೆದುಕೊಂಡು ನವೀನ್, ಬಾಬು ಹಾಗೂ ನರೇಂದ್ರ ಹೋಗುತ್ತಿದ್ದಾಗ ಏಕಾಎಕಿ ಬೈಕ್‍ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ನಗದು ಕಸಿಯಲು ಯತ್ನಿಸಿದ್ದಾರೆ, ಈ ವೇಳೆ ಪ್ರತಿರೋಧ ತೋರಿದ ಮೂವರಿಗೂ ಚಾಕುವಿನಿಂದ ಇರಿದು ಮೊಬೈಲ್, ಪರ್ಸ್ ದೋಚಿ ಪರಾರಿಯಾಗಿ, ಅಲ್ಲಿಂದ ಸ್ವಲ್ಪ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮತ್ತೊಬ್ಬ ಯುವಕನಿಗೆ ಚಾಕುವಿನಿಂದ ಬೆದರಿಸಿ ನಗದು, ಮೊಬೈಲ್ ಕಸಿದು ಪರಾರಿಯಾಗಿದ್ದಾರೆ ಎಂದು ಗ್ರಾಮಾಂತರ ಎಸ್‍.ಪಿ ಅಮಿತ್‍ಸಿಂಗ್ ತಿಳಿಸಿದ್ದಾರೆ. ಅವಲಹಳ್ಳಿ ಪೊಲೀಸರು ಎರಡೂ ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ