ಟಿಪ್ಪರ್ ಲಾರಿ ಹರಿದು ಬಾಲಕಿ ಸಾವು !

Kannada News

09-08-2017

ಬೆಂಗಳೂರು: ನಗರದ ಹೊರವಲಯದ ದೇವನಹಳ್ಳಿಯ, ರಾಮನಹಳ್ಳಿ ಬಳಿ ವೇಗವಾಗಿ ಬಂದ ಟಿಪ್ಪರ್ ಲಾರಿ ಹರಿದು, ರಸ್ತೆ ದಾಟುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಡ ರಾತ್ರಿ ಸಂಭವಿಸಿದೆ. ಮೃತ ಬಾಲಕಿಯನ್ನು ಸೊಣ್ಣೇನಹಳ್ಳಿ ನಿವಾಸಿ ಮುನಿರಾಜು-ಸುಮಿತ್ರ ದಂಪತಿಯ ಪುತ್ರಿ ಧನುಶ್ರೀ(9)ಎಂದು ಗುರುತಿಸಲಾಗಿದೆ. ಧನುಶ್ರೀ ತನ್ನ ಅಜ್ಜಿ ಊರಾದ ರಾಮನಹಳ್ಳಿಗೆ ಬಂದಿದ್ದೂ, ಆಟವಾಡಲು ಹೋಗಿ ರಸ್ತೆ ದಾಟುವ ವೇಳೆ ಅತಿವೇಗದಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು, ಮೃತಪಟ್ಟಿದೆ. ಬಾಲಕಿಯ ಸಾವಿಗೆ ಕಾರಣನಾದ ಟಿಪ್ಪರ್ ಚಾಲಕನ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಈ ಸಂಬಂಧ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಲಾರಿ ವಶಕ್ಕೆ ಪಡೆದು ಚಾಲಕ ಕೈಲಾಸ್ ಯಾದವ್‍ ನನ್ನು ಬಂಧಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ