ಪ್ರತ್ಯೇಕ ಧರ್ಮ: ನಾಳೆ ಮಹತ್ವದ ಸಭೆ !

Kannada News

09-08-2017

ಬೆಂಗಳೂರು: ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸುವ ಮತ್ತು ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸುವ ಕುರಿತು ಆಗಸ್ಟ್ 10 ರ ಗುರುವಾರ ಮಠಾಧೀಶರು, ಜನಪ್ರತಿನಿಧಿಗಳು,ಸಾಹಿತಿಗಳು,ವಿದ್ವಾಂಸರ ಮಹತ್ವದ ಸಭೆ ನಡೆಯಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಈ ವಿಷಯ ತಿಳಿಸಿದ್ದು, ಸಧ್ಯಕ್ಕೆ ದೇಶದಲ್ಲಿ ಆರು ಅಲ್ಪಸಂಖ್ಯಾತ ಧರ್ಮಗಳಿವೆ. ಏಳನೆಯ ಧರ್ಮವಾಗಿ ಲಿಂಗಾಯತ ಧರ್ಮ ಸೇರಬೇಕು ಎಂಬುದು ನಮ್ಮ ಉದ್ದೇಶ ಎಂದರು.

1993 ರಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ, ಜೊರಾಷ್ಟ್ರಿಯನ್ ಸೇರಿದಂತೆ ಐದು ಧರ್ಮಗಳು ಅಲ್ಪಸಂಖ್ಯಾತ ಧರ್ಮಗಳಾಗಿದ್ದವು. ನಂತರ ಆರನೇ ಅಲ್ಪಸಂಖ್ಯಾತ ಧರ್ಮವಾಗಿ ಜೈನ ಧರ್ಮ ಸೇರಿತು. ಏಳನೇ ಧರ್ಮವಾಗಿ ಲಿಂಗಾಯತ ಧರ್ಮ ಸೇರಬೇಕು ಎಂಬುದು ತಮ್ಮ ಉದ್ದೇಶ ಎಂದರು.

ಈ ಕುರಿತು ನಾಡಿನ ಪ್ರಮುಖ ಮಠಾಧೀಶರು,ಜನಪ್ರತಿನಿಧಿಗಳು,ಸಾಹಿತಿಗಳು,ವಿದ್ವಾಂಸರು ಗುರುವಾರ ಮಹತ್ವದ ಸಭೆ ಸೇರಲಿದ್ದು ಅಲ್ಲಿ ಅಗತ್ಯದ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಹಿಂದೂ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಪರಸ್ಪರ ಸಂಬಂಧವಿಲ್ಲ. ಶಿವ ಹಾಗೂ ಭಕ್ತಿಯ ವಿಷಯದಲ್ಲಿ ಸಾಮ್ಯವಿದೆ ಎಂಬುದನ್ನು ಬಿಟ್ಟರೆ ಬೇರೆ ಯಾವ ವಿಷಯದಲ್ಲೂ ಸಾಮ್ಯತೆ ಇಲ್ಲ ಎಂದು ಅವರು ವಿವರಿಸಿದರು. ವೀರಶೈವ ಎಂಬುದೂ ಲಿಂಗಾಯತ ಧರ್ಮದ ಒಂದು ಒಳಪಂಗಡ ಎಂಬುದು ನಮ್ಮ ವಾದ. ಈ ಕುರಿತು ವಿದ್ವಾಂಸರು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಗುರುವಾರದ ಸಭೆಯಲ್ಲಿ ಈ ಎಲ್ಲ ವಿಷಯಗಳ ಕುರಿತು ಚರ್ಚೆಯಾಗಲಿದೆ ಎಂದು ಅವರು ಹೇಳಿದರು.

 

 

 

 

 

 

 

 

 

 

 

 

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ