ಚೀನಾಗೆ ಭಾರತೀಯರು ಬುದ್ಧಿ ಕಲಿಸಬೇಕು !

Kannada News

09-08-2017

ಬೆಳಗಾವಿ: ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸುವಂತೆ, ಜನರಲ್ಲಿ ಜಾಗೃತಿ ಮೂಡಿಸಲು, ಬೆಳಗಾವಿ ಬಿಜೆಪಿ ಮತ್ತು ಸ್ವದೇಶಿ ಜಾಗರಣ್ ಮಂಚ್ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ನಗರದ ರಾಣಿ ಚನ್ನಮ್ಮ ವೃತದಿಂದ, ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಚೀನಾ, ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ. ಚೀನಾ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿ ತನ್ನ ದೇಶದ ಆದಾಯ ಹೆಚ್ಚು ಮಾಡಿಕೊಳ್ಳುತ್ತಿದೆ. ಚೀನಾ ಮೇಡ್ ವಸ್ತುಗಳನ್ನ ಬಹಿಷ್ಕಾರ ಮಾಡಿ, ಚೀನಾ ದೇಶಕ್ಕೆ ಭಾರತೀಯರು ಬುದ್ಧಿ ಕಲಿಸಬೇಕಿದೆ ಎಂದು, ಪ್ರತಿಭಟನಾ ನಿರತರು ರಸ್ತೆಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ, ಪ್ರತಿಭಟನೆ ನಡೆಸಿದರು. ಶಾಸಕ ಸಂಜಯ್ ಪಾಟೀಲ್ ಹಾಗೂ ವಿ.ಐ.ಪಾಟೀಲ್ ಮತ್ತು ನೂರಾರು ಜನ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ